` ಜಮೀನು ಮಾರಿ ಆಸ್ಪತ್ರೆ ಕಟ್ಟಿಸಿದ ಲೀಲಾವತಿ - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
ಜಮೀನು ಮಾರಿ ಆಸ್ಪತ್ರೆ ಕಟ್ಟಿಸಿದ ಲೀಲಾವತಿ
Leelavathi Image

ನೆಲಮಂಗಲ ಸಮೀಪದ ಸೋಲದೇವನಹಳ್ಳಿಯಲ್ಲಿ ಲೀಲಾವತಿ ಅವರನ್ನು ಆಸ್ಪತ್ರೆ ಕಟ್ಟಿಸಿದ್ದಾರೆ. ಅದೂ ತಮ್ಮ ಸ್ವಂತ ಖರ್ಚಿನಿಂದ. ಈ ಆಸ್ಪತ್ರೆಗಾಗಿ ಚೆನ್ನೈನಲ್ಲಿದ್ದ ತಮ್ಮ ಜಮೀನನ್ನು ಮಾರಿದ್ದಾರೆ.  ಸೋಲದೇವನಹಳ್ಳಿಯ ಜನತೆಗೆ ಒಳ್ಳೆಯದಾಗಲಿ ಎಂಬ ಆಸೆಯೊಂದಿಗೆ ಕಟ್ಟಿದ ಆಸ್ಪತ್ರೆಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಉದ್ಘಾಟಿಸಿದರು.

ಆಸ್ಪತ್ರೆ ನಿರ್ಮಾಣಕ್ಕಾಗಿ 1 ಕೋಟಿ 20 ಲಕ್ಷ ರೂಪಾಯಿ ಖರ್ಚಾಗಿದೆ. ಅಷ್ಟೂ ಹಣವನ್ನು ತಮ್ಮ ನಿವೇಶನ ಮಾರಿ ಬಂದ ಹಣದಿಂದ ಕಟ್ಟಿರುವುದು ವಿಶೇಷ. ದುಡ್ಡು ಹೆಚ್ಚಿದ್ದವರು ಮಾಡುವ ಸಹಾಯವೇ ಬೇರೆ. ದುಡ್ಡು ಇಲ್ಲದೇ ಇದ್ದರೂ ಸ್ವಂತ ಜಮೀನು ಮಾರಿ ಸೇವೆ ಮಾಡುವುದು ಬೇರೆ. ಈ ವಿಷಯಕ್ಕೆ ಲೀಲಾವತಿ ಭಿನ್ನವಾಗಿ ನಿಲ್ಲುತ್ತಾರೆ.

20 ವರ್ಷಗಳ ಹಿಂದೆ ಬೆಟ್ಟವೊಂದನ್ನ ತೆಗೆದುಕೊಂಡಿದ್ವಿ. ಈ ಜಾಗ ಯಾಕೆ ಎಂದು ಕೇಳಿದಾಗ, ಇಲ್ಲೇ ಏನಾದರೂ ಮಾಡಬೇಕು ಅಂತ ಅಮ್ಮ ಹೇಳಿದ್ರು. ಈಗ ಅಮ್ಮ ಕಂಡ ಕನಸು ನನಸಾಗಿದೆ ಎಂದರು ವಿನೋದ್ ರಾಜ್.

ಸೋಲದೇವನಹಳ್ಳಿ ಅಂದ್ರೆ ಏನು ಅಂತ ಯೋಚನೆ ಮಾಡುತ್ತಿದ್ದೆ. ದೇವರು ಇಲ್ಲಿನ ನಿಸರ್ಗ ಸೌಂದರ್ಯಕ್ಕೆ ಸೋತಿದ್ದಾನೆ. ಬಹುಶಃ ಅದಕ್ಕೆ ಸೋಲದೇವನಹಳ್ಳಿ ಅಂತ ಹೆಸರಿಡಲಾಗಿದೆ. ಇಂತಹ ಜಾಗದಲ್ಲಿ ಲೀಲಾವತಿ ಬದುಕಿನ ಅನೇಕ ಸವಾಲುಗಳನ್ನು ಎದುರಿಸಿದ್ದಾರೆ. ಅವರು ಮನಸ್ಸು ಮಾಡಿದ್ದರೆ, ಪ್ರತಿಷ್ಟಿತ ಬಡಾವಣೆಯಲ್ಲಿ ಮನೆ ತೆಗೆದುಕೊಂಡು ಜೀವನ ಮಾಡಬಹುದಿತ್ತು. ಆದರೆ, ಇಲ್ಲಿಗೆ ಬಂದು ತೋಟ ಮಾಡಿದ್ದಾರೆ. ಅವರು ಇನ್ನೂ ನೂರ್ಕಾಲ ಚೆನ್ನಾಗಿ ಬಾಳಿ ಬದುಕಬೇಕು. ಲೀಲಾವತಿ ಇಲ್ಲಿ ಒಂದು ಪಶು ಆಸ್ಪತ್ರೆ ಬೇಕು ಅಂತಲೂ ಲೀಲಾವತಿ ಅವರು ಹೇಳಿದ್ದಾರೆ. ಅವರ ಬೇಡಿಕೆಯನ್ನು ನಾವು ಈಡೇರಿಸುತ್ತೇವೆ. ಲೀಲಾವತಿ ಅವರು ನಿರ್ಮಿಸಿರುವ ಆಸ್ಪತ್ರೆಗೆ ಸಕಲ ಸೌಲಭ್ಯಗಳನ್ನ ಕೊಡುತ್ತೇವೆ’’ ಎಂದರು ಸಿಎಂ ಬಸವರಾಜ ಬೊಮ್ಮಾಯಿ.