ಬ್ಯಾನರ್ ಹೊಂಬಾಳೆ. ಪ್ರೊಡ್ಯೂಸರ್ ವಿಜಯ್ ಕಿರಗಂದೂರು. ಟ್ರೇಲರ್, ಹಾಡುಗಳೋ ಅದ್ಭುತ. ಮೇಕಿಂಗ್‍ನಲ್ಲಿ ಅದ್ಧೂರಿತನ. ? ಚಿತ್ರದ ಕಥೆಯೋ ಪ್ರಕೃತಿ ಮತ್ತು ಮಾನವನ ಸಂಘರ್ಷದ ಕುರಿತಾದದ್ದು. ಎಲ್ಲವೂ ಇರುವ ಕಾಂತಾರ ಚಿತ್ರವನ್ನು ಪ್ಯಾನ್ ಇಂಡಿಯಾ ಸಿನಿಮಾ ಮಾಡಲಿಲ್ಲ ಏಕೆ ಈ ಪ್ರಶ್ನೆಗೆ ಉತ್ತರ ಕೊಟ್ಟಿದ್ದಾರೆ ರಿಷಬ್ ಶೆಟ್ಟಿ.
ಚಿತ್ರದಲ್ಲಿನ ಕಥೆಯೇನೋ ಯುನಿವರ್ಸಲ್. ಯಾವುದೇ ಭಾಷೆಗೂ ಅಪ್ಲೈ ಆಗುವಂತಹುದು. ಆದರೆ.. ಈ ಚಿತ್ರದ ಕಥೆಯಲ್ಲಿ ಪ್ರಾದೇಶಿಕ, ನೆಲದ ಮಣ್ಣಿನ ಸೊಗಡು ಕೂಡಾ ಇದೆ. ಕರಾವಳಿ ಭಾಗದ ಹಿನ್ನೆಲೆಯ ಕಥೆಗೆ ಆ ಭಾಗದ ಪ್ರಾದೇಶಿಕ ಸಂಸ್ಕøತಿಯನ್ನು ಬಳಸಿಕೊಂಡಿದ್ದೇವೆ. ಭೂತಕೋಲ ಇದೆ. ನಾಗಾರಾಧನೆ ಕೂಡಾ ಇದೆ. ಕಂಬಳ ಇದೆ. ದೈವಾರಾಧನೆ ಇದೆ. ಇವೆಲ್ಲವೂ ಕಥೆಗೆ ಪೂರಕವಾಗಿಯೇ ಬರುತ್ತವೆ. ಇಲ್ಲಿನ ಸಂಸ್ಕøತಿ ಗೊತ್ತಿರುವವರಿಗೆ ಸುಲಭವಾಗಿ ಅರ್ಥವಾಗುತ್ತೆ. ಹಾಗೆಯೇ ಪ್ರತಿ ಪ್ರಾದೇಶಿಕ ಭಾಷೆಗಳೂ ವಿಭಿನ್ನ ಎಂದಿದ್ದಾರೆ ರಿಷಬ್ ಶೆಟ್ಟಿ. ಹೀಗಾಗಿಯೇ ಚಿತ್ರ ಪ್ಯಾನ್ ಇಂಡಿಯಾ ಮೂವಿ ಆಗಲಿಲ್ಲ. ಇಡೀ ಭಾರತದಲ್ಲಿ ಹುಡುಕಾಡಿದರೆ ಪ್ರತಿ ಪ್ರದೇಶದಲ್ಲೂ ಇಂತಹ ಕಥೆಗಳು ಸಿಗುತ್ತವೆ. ಅವೆಲ್ಲವೂ ಅಲ್ಲಿನ ಮಣ್ಣಿನ ಸಂಸ್ಕøತಿಯೊಂದಿಗೆ ಬೆರೆತಿರುತ್ತವೆ ಎಂದಿದ್ದಾರೆ ರಿಷಬ್ ಶೆಟ್ಟಿ.
ಚಿತ್ರವನ್ನು ಮಕ್ಕಳಿಗೆ ಅರ್ಥವಾಗುವಂತೆಯೇ ರೂಪಿಸಿದ್ದೇವೆ. ಆಕ್ಷನ್, ಕಾಮಿಡಿ, ಸ್ವಲ್ಪ ರೊಮ್ಯಾನ್ಸ್..ಥ್ರಿಲ್ಲರ್ ಎಲಿಮೆಂಟ್ಸ್ ಎಲ್ಲವೂ ಇದೆ. ಅವೆಲ್ಲವೂ ಆಗಿಯೇ ಚಿತ್ರ ಎಲ್ಲರಿಗೂ ಇಷ್ಟವಾಗುತ್ತದೆ. ಕಿಶೋರ್ ಅವರಿಗೆ ಸ್ಕ್ರೀನ್ ಸ್ಪೇಸ್ ಜಾಸ್ತಿಯೇ ಇದೆ. ಸಪ್ತಮಿ ಗೌಡ ಉತ್ತಮವಾಗಿ ನಟಿಸಿದ್ದಾರೆ. ನಮ್ಮ ಆಸ್ಥಾನ ಕಲಾವಿದರಾದ ಅಚ್ಯುತ್ ಮತ್ತು ಪ್ರಮೋದ್ ಶೆಟ್ಟಿಯವರಂತೂ ಅದ್ಭುತವಾಗಿ ತೆರೆ ಆವರಿಸಿಕೊಂಡಿದ್ದಾರೆ ಎನ್ನುತ್ತಾರೆ ರಿಷಬ್ ಶೆಟ್ಟಿ.
1994ರಲ್ಲಿ ಫಾರೆಸ್ಟ್ ಗಾರ್ಡ್ ಕೆಲಸಕ್ಕೆ ಮಹಿಳೆಯರ ನೇಮಕಾತಿ ಆಯಿತು. ಅದನ್ನು ಬೇಸ್ ಆಗಿಟ್ಟುಕೊಂಡೇ ಇನ್ನೂ ಸ್ವಲ್ಪ ಹಿಂದಕ್ಕೆ ಹೋಗಿ ಸಪ್ತಮಿ ಗೌಡರನ್ನು ಲೇಡಿ ಫಾರೆಸ್ಟ್ ಗಾರ್ಡ್ ಆಗಿ ಪರಿಚಯಿಸಿದೆವು ಎನ್ನುವ ರಿಷಬ್, ಚಿತ್ರದ ಬಗ್ಗೆ ಭರ್ಜರಿ ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಅವರಷ್ಟೇ ಅಲ್ಲ.. ಪ್ರೇಕ್ಷಕರಿಗೂ ಭಾರಿ ನಿರೀಕ್ಷೆಯೇ ಇದೆ. ಹೀಗಾಗಿಯೇ ಬುಕ್ಕಿಂಗ್ ಶುರುವಾದ ತಕ್ಷಣ ನೂಕುನುಗ್ಗಲು ಶುರುವಾಗಿದೆ.