ಮನೆಗಂತೂ ಒಬ್ಬ ಮಗ ಇದ್ದಾನೆ. ರಾಯನ್ ನನಗೂ ಮಗ. ಮಗ ಹುಟ್ಟಿದ್ರೆ ನಿರಾಶೆಯಾಗುತ್ತೇನೋ.. ಏಕೆಂದರೆ ಮನೆಗೆ ಈಗಾಗಲೇ ಒಬ್ಬ ಮಗ ಇದ್ದಾನೆ. ಅವನಿಗೆ ತಂಗಿಯೇ ಬರಲಿ ಎನ್ನುವುದು ನನ್ನ ಹಾಗೂ ಪ್ರೇರಣಾ ಆಸೆ ಕೂಡಾ..
ಈ ಮಾತು ಹೇಳಿರೋದು ಖುದ್ದು ಧ್ರುವ ಸರ್ಜಾ. ಟಿವಿಯೊಂದಕ್ಕೆ ಮಾತನಾಡುವ ವೇಳೆ ಧ್ರುವ ಸರ್ಜಾ ತಮ್ಮ ಮಗುವಿನ ನಿರೀಕ್ಷೆ ಮತ್ತು ರಾಯನ್ ಬಗ್ಗೆಯೂ ಮಾತನಾಡಿದ್ದಾರೆ. ಚಿರಂಜೀವಿ ಸರ್ಜಾ ಮತ್ತು ಮೇಘನಾ ರಾಜ್ ಪುತ್ರ ರಾಯನ್`ನ್ನು ನನ್ನ ಮಗ ಎಂದಿದ್ದಾರೆ. ಇದೇ ವೇಳೆ ಮೊದಲ ಮಗುವಿನ ನಿರೀಕ್ಷೆಯಲ್ಲಿರುವ ಸರ್ಜಾ ದಂಪತಿ ಮೊದಲ ಮಗು ಹೆಣ್ಣಾಗಲಿ ಎಂದು ಕನಸು ಕಟ್ಟಿದ್ದಾರಂತೆ.
ಮಕ್ಕಳಾಗುವುದೇ ಸಂಭ್ರಮ. ಈಗ ಮನೆಗೆ ಅಣ್ಣನೇ ಮತ್ತೆ ಹುಟ್ಟಿ ಬರ್ತಾನೋ.. ಅಜ್ಜಿಯೇ ಮತ್ತೆ ಬರ್ತಾಳೋ.. ನಿರೀಕ್ಷೆಯಲ್ಲಿದ್ದೇವೆ ಎನ್ನುವುದು ಧ್ರುವ ಸರ್ಜಾ ಮಾತು.
ಚಿರು, ಧ್ರುವ ಪಾಲಿಗೆ ಕೇವಲ ಅಣ್ಣನಾಗಿರಲಿಲ್ಲ. ಅವರಿಬ್ಬರ ಬಾಂಧವ್ಯವೇ ಹಾಗಿತ್ತು. ಚಿರು ದೂರವಾಗಿದ್ದರೂ.. ಅತ್ತಿಗೆ ಮೇಘನಾ ಅವರೊಂದಿಗೆ ಇಂದಿಗೂ ಅದೇ ಪ್ರೀತಿ ವಾತ್ಸಲ್ಯ ಉಳಿಸಿಕೊಂಡಿದ್ದಾರೆ ಧ್ರುವ ಸರ್ಜಾ. ಧ್ರುವ ಸರ್ಜಾ ಅವರ ಬಗ್ಗೆ ಮೇಘನಾ ರಾಜ್ ಕೂಡಾ ಅದೇ ವಾತ್ಸಲ್ಯ ಇಟ್ಟುಕೊಂಡಿದ್ದಾರೆ.