ಶಕೀಲಾ ಬಾನು ಬ್ಯಾಂಕ್ ಮ್ಯಾನೇಜರ್ ಆಗಿ ಕೆಲಸ ಮಾಡುತ್ತಿದ್ದರೆ, ಟೈಲರ್ ಆಗಿ ಜಗ್ಗೇಶ್. ಅವರ ಜೊತೆ ಬಿರಿಯಾನಿ ಅಂಗಡಿ ನಡೆಸುವ ದೊನ್ನೆ ರಂಗಮ್ಮ, ಅಸಿಸ್ಟೆಂಟ್ ಆಗಿ ನಂಜಮ್ಮ, ಮಠದ ಸ್ವಾಮೀಜಿ.. ಹೀಗೆ ಹಲವರ ಪಾತ್ರ ಒಳಗೊಂಡಿರುವ ಪಾತ್ರವೇ ತೋತಾಪುರಿ. ಚಿತ್ರದಲ್ಲಿ ಕಾಮಿಡಿ ಅಷ್ಟೇ ಅಲ್ಲ, ಅಲ್ಲೊಂದು ಸಮಾಜಮುಖಿ ಸಂದೇಶವೂ ಇದೆ. ತೋತಾಪುರಿಯನ್ನು ನವರಸ ನಾಯಕ ಜಗ್ಗೇಶ್ ಹೀಗೆ ವಿವರಿಸುತ್ತಾರೆ.
ಸಾಮಾನ್ಯವಾಗಿ ಕಥೆ ಕೇಳುವ ನಾನು ವಿಜಯ್ ಪ್ರಸಾದ್ ಮೇಲೆ ನಂಬಿಕೆಯಿಟ್ಟು ಒಪ್ಪಿಕೊಂಡೆ. ಕಥೆ ಕೇಳಲಿಲ್ಲ. ಅವರೊಬ್ಬ ಅದ್ಭುತ ಬರಹಗಾರರು ಎನ್ನುತ್ತಾರೆ ಜಗ್ಗೇಶ್. ಜಗ್ಗೇಶ್ ಎದುರು ಆದಿತಿ ಪ್ರಭುದೇವ, ಡಾಲಿ ಧನಂಜಯ್ ಎದುರು ಸುಮನ್ ರಂಗನಾಥ್ ಇದ್ದಾರೆ. ನನ್ನ ವೃತ್ತಿ ಜೀವನದಲ್ಲಿ ಇದೊಂದು ನವಿಲುಗರಿ ಎನ್ನುವುದು ಜಗ್ಗೇಶ್ ಭರವಸೆ. ಚಿತ್ರಕ್ಕೆ ಯು/ಎ ಪ್ರಮಾಣ ಪತ್ರ ಸಿಕ್ಕಿದೆ. ಸಿನಿಮಾ ಸೆ.30ರಂದು ರಿಲೀಸ್ ಆಗುತ್ತಿದೆ.