ಬಾಂಡ್ ರವಿ ಟೀಸರ್ ಹೊರಬಂದಿದೆ. ಉಡಾಳ್ ಬಾಬು ಆಗಿ ಮಿಂಚು ಹರಿಸಿದ್ದ ಪ್ರಮೋಸ್ ಬಾಂಡ್ ರವಿಯಾಗಿ ಬೊಂಬಾಟ್ ಆಗಿ ಮಿಂಚಲು ಸಜ್ಜಾಗಿದ್ದಾರೆ. ಬಾಂಡ್ ರವಿ ಲವ್ ಸ್ಟೋರಿ ಇರೋ ಆ್ಯಕ್ಷನ್ ಸಿನಿಮಾ. ಈ ಸಿನಿಮಾ ಮೂಲಕ ದೊಡ್ಡ ಮಟ್ಟದಲ್ಲಿ ಗೆಲ್ಲುವ ವಿಶ್ವಾಸ ಪ್ರಮೋದ್ ಅವರಲ್ಲಿದೆ.
ಇದುವರೆಗೆ ಪ್ರೇಮಕಥೆ ಆಧರಿತ ಚಿತ್ರಗಳಿಗೇ ಹೆಚ್ಚು ಸಂಗೀತ ನೀಡುತ್ತಿದ್ದ ಮನೋಮೂರ್ತಿ ಬಾಂಡ್ ರವಿಗೆ ಮ್ಯೂಸಿಕ್ ಕೊಟ್ಟಿರುವುದೇ ವಿಶೇಷ. ಪ್ರಜ್ವಲ್ ನಿರ್ದೇಶನದ ಚಿತ್ರವಿದು. ಚಿತ್ರದ ಹೀರೋ ಪ್ರಮೋದ್ ಮತ್ತು ಹೀರೋಯಿನ್ ಕಾಜಲ್ ಕುಂದರ್ ಬಗ್ಗೆ ಮೆಚ್ಚುಗೆಯ ಮಾತನನಾಡಿದ್ದಾರೆ ಮನೋಮೂರ್ತಿ.
11 ವರ್ಷಗಳಿಂದ ಸಿನಿಮಾ ಕ್ಷೇತ್ರದ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿರುವ ಪ್ರಜ್ವಲ್ ಅವರಿಗೆ ಇದು ಮೊದಲ ಸಿನಿಮಾ. ಪ್ರಮೋದ್ ನನಗೆ ಸಿಕ್ಕಿದ್ದು ನನ್ನ ಅದೃಷ್ಟ ಎನ್ನುವ ಪ್ರಜ್ವಲ್ ಒಳ್ಳೆಯ ಸಿನಿಮಾ ಮಾಡಿರುವ ತೃಪ್ತಿ ಇದೆ ಎಂದಿದ್ದಾರೆ.
ನರಸಿಂಹ ಮೂರ್ತಿ ನಿರ್ಮಾಪಕರಾಗಿದ್ದಾರೆ. ಮಲ್ಲಿಕಾರ್ಜುನ್ ಕಾಶಿ, ಝೇವಿಯರ್ ಫರ್ನಾಂಡಿಸ್ ಸಹ ನಿರ್ಮಾಪಕರು. ಸಿನಿಮಾ ನವೆಂಬರಲ್ಲಿ ರಿಲೀಸ್ ಆಗುವ ಸಾಧ್ಯತೆ ಇದೆ.