ರಿಷಬ್ ಶೆಟ್ಟಿ ಹೀರೋ ಮತ್ತು ನಿರ್ದೇಶಕ. ಹೊಂಬಾಳೆ ಬ್ಯಾನರ್‍ನ ಸಿನಿಮಾ.. ಇಷ್ಟಿದ್ದ ಮೇಲೆ ಕ್ರೇಜ್ ಶುರುವಾಗುತ್ತದೆಂದೇ ಲೆಕ್ಕ. ನಿರೀಕ್ಷೆ ಸುಳ್ಳಾಗಿಲ್ಲ. ಬುಕ್ಕಿಂಗ್ ಶುರುವಾಗಿದ್ದೇ ತಡ.. ಪ್ರೇಕ್ಷಕರು ರೆಡಿಯಾಗುತ್ತಿದ್ದಾರೆ.
ರಿಷಬ್ ಶೆಟ್ಟಿ, ಸಪ್ತಮಿ ಗೌಡ, ಕಿಶೋರ್, ಪ್ರಮೋದ್ ಶೆಟ್ಟಿ, ಅಚ್ಯುತ್ ಕುಮಾರ್ ಪ್ರಮುಖ ಪಾತ್ರದಲ್ಲಿರೋ ಚಿತ್ರ ಕಾಂತಾರ. ಕಾಡು ಮತ್ತು ಮನುಷ್ಯರ ನಡುವಿನ ಹೊಡೆದಾಟದ ಕಥೆಯಲ್ಲಿ ಕರಾವಳಿಯ ಸಂಸ್ಕøತಿ ಇದೆ. ಸೊಗಡು ಇದೆ.
ಚಿತ್ರದ ಪೇಯ್ಡ್ ಪ್ರೀಮಿಯರ್ ಶೋಗಳು ಶುರುವಾಗಿವೆ. ಬೆಂಗಳೂರು, ಮೈಸೂರು, ಮಂಗಳೂರು, ಶಿವಮೊಗ್ಗ, ಉಡುಪಿ, ಕುಂದಾಪುರದಲ್ಲಿ ಪ್ರೀಮಿಯರ್ ಶೋಗಳಿವೆ. ವಿಶೇಷವೆಂದರೆ ಕೇರಳದ ಕಾಸರಗೋಡಿನಲ್ಲೂ ಪ್ರೀಮಿಯರ್ ಶೋ ಇರೋದು. ಚೆನ್ನೈ, ಹೈದರಾಬಾದ್, ಕೊಚ್ಚಿಯಲ್ಲೂ ಪ್ರೀಮಿಯರ್ ಶೋಗಳಿವೆ.
ಕನ್ನಡದ ಜೊತೆಗೆ ತುಳುವಿನಲ್ಲೂ ಬರುತ್ತಿರುವುದು ವಿಶೇಷ. ಸುಮಾರು ಸಿನಿಮಾ ರಿಲೀಸ್ ಆಗುವ ಥಿಯೇಟರ್, ಮಲ್ಟಿಪ್ಲೆಕ್ಸುಗಳ ಕಥೆ ಬಿಡಿ.. ಹೆದ್ದಾರಿಗಳಲ್ಲೂ 150ಕ್ಕೂ ಹೆಚ್ಚು ಕಟೌಟ್ ಹಾಕಲಾಗಿದೆ.
ಚಿತ್ರದ ಹಾಡು, ಟ್ರೇಲರ್, ಮೇಕಿಂಗ್ ದೃಶ್ಯಗಳ ಕಂಟೆಂಟ್ ಬಿಟ್ಟಿದ್ದೇವೆ. ಪ್ರೇಕ್ಷಕರಿಗೆ ಇಷ್ಟವಾಗಿದೆ. ಅದೆಲ್ಲವೂ ಈಗ ಟಿಕೆಟ್ಟುಗಳಾಗಿ ಬದಲಾಗಬೇಕಿದೆ ಎಂದಿದ್ದಾರೆ ರಿಷಬ್ ಶೆಟ್ಟಿ