ಗುರು ಶಿಷ್ಯರು ಸಿನಿಮಾ ಕ್ರೇಜ್ ಜೋರಾಗಿಯೇ ಇದೆ. ಕನ್ನಡಿಗರಿಗೆ ಅಪರೂಪದ ಕ್ರೀಡಾ ಸಿನಿಮಾ ಸಿಕ್ಕಿದೆ. ಅದೂ ನಮ್ಮದೇ ನೆಲದ ಖೋಖೋ. ಅದನ್ನು ಚೆಂದದ ಕಥೆ, ಚಿತ್ರಕಥೆಯೊಂದಿಗೆ.. ಅದ್ಭುತ ಮೇಕಿಂಗ್ ಜೊತೆ.. ಹೇಳಿರೋದು ಜಡೇಶ್ ಕುಮಾರ್ ಹಂಪಿ.
ನಾನು, ನಿಶ್ವಿಕಾ, ತರುಣ್ ಅಲ್ಲ. ಚಿತ್ರದ ಹೀರೋಗಳು ನಮ್ಮ ಹುಡುಗರು. 12 ಹುಡುಗರ ಶ್ರಮಕ್ಕೆ ಫಲ ಸಿಕ್ಕಿದೆ ಎಂದಿದ್ದಾರೆ ಶರಣ್. ಚಿತ್ರದ ನಿರ್ದೇಶಕ ಜಡೇಶ್ ಅವರನ್ನು ಸ್ಪೆಷಲ್ಲಾಗಿಯೇ ಹೊಗಳಿದ್ದಾರೆ.
ಥಿಯೇಟರಿಗೆ ರಿಯಾಕ್ಷನ್ ನೋಡೋಕೆ ಬಂದ ಶರಣ್, ನಿಶ್ವಿಕಾಗೆ ಅಭಿಮಾನಿಗಳು ಸೇಮ್ ಶಿಷ್ಯರು ಗುರುಗಳ ಕಾಲೆಳೆಯುವಂತೆಯೇ ಕಾಲೆಳೆದದ್ದು ವಿಶೇಷವಾಗಿತ್ತು. ಶರಣ್ ಕಕ್ಕಾಬಿಕ್ಕಿಯಾಗಿ.. ಒಳಗೊಳಗೇ ಖುಷಿಯಾಗಿದ್ದರು.
ಇದು ಕನ್ನಡಕ್ಕೆ ಮತ್ತು ಖೋಖೋಗೆ ಸಿಕ್ಕ ಗೆಲುವು ಎನ್ನುವುದು ಜಡೇಶ್ ಕುಮಾರ್ ಮಾತು. ಕನ್ನಡದಲ್ಲಿ ಇದು ಹೊಸ ಟ್ರೆಂಡ್ ಸೃಷ್ಟಿಸುತ್ತೆ ಎಂಬ ಮಾತೇ ಥ್ರಿಲ್ ಕೊಟ್ಟಿದೆ ಎಂದಿದ್ದಾರೆ.