ತೋತಾಪುರಿ ಚಿತ್ರ ರಿಲೀಸ್ ಆಗೋಕೆ ರೆಡಿಯಾಗಿದೆ. ಭಾಗ 1&2 ಚಿತ್ರಗಳೆಂದರೆ.. ಅದು ಆ್ಯಕ್ಷನ್, ಐತಿಹಾಸಿಕ ಸಿನಿಮಾಗಳು. ಬಾಹುಬಲಿ, ಕೆಜಿಎಫ್, ಪುಷ್ಪ.. ಹೀಗೆ.. ಕಾಮಿಡಿ ಚಿತ್ರಗಳು ಭಾಗ 1, ಭಾಗ 2 ಎಂದು ಬಂದಿದ್ದವಾದರೂ.. ಸಕ್ಸಸ್ ಆದ ಮೇಲೆ ಅದೇ ಟೈಟಲ್ ಇಟ್ಟುಕೊಂಡು ಬಂದಂತವೇ.. ಆದರೆ ತೋತಾಪುರಿ ಹಾಗಲ್ಲ. ಎರಡೂ ಭಾಗಗಳನ್ನು ಮೊದಲೇ ಪ್ಲಾನ್ ಮಾಡಿಕೊಂಡು ಚಿತ್ರೀಕರಿಸಿಯೇ ಮೊದಲ ಭಾಗ ರಿಲೀಸ್ ಮಾಡುತ್ತಿದ್ದಾರೆ.
ಇದೊಂದು ದಾಖಲೆ. ಹೊಸದು. ಕಾಮಿಡಿ ಚಿತ್ರವೊಂದು ಎರಡು ಭಾಗಗಳಲ್ಲಿ ಬರುವುದು ಮೊದಲೇ ಫಿಕ್ಸ್ ಆಗಿ ಬರುತ್ತಿರುವು ಸ್ಪೆಷಲ್ ಎಂದು ಚಿತ್ರತಂಡವೇ ಖುಷಿಯಾಗಿದೆ.
ಜಗ್ಗೇಶ್ ಎದುರು ಆದಿತಿ ನಾಯಕಿ. ಡಾಲಿ ಎದುರು ಸುಮನ್ ರಂಗನಾಥ್.. ಅಲ್ಲೇ ಚಿತ್ರದ ಕುತೂಹಲದ ಎಳೆಯೊಂದು ಇದೆ.
ನನ್ನದು ಶಕೀಲಾ ಬಾನು ಅನ್ನೋ ಮುಸ್ಲಿಂ ಯುವತಿಯ ಪಾತ್ರ. ಟೀಚರ್. ಎಲ್ಲರೂ ಮುಸ್ಲಿಮರು ಎಂದರೆ ಹೋಗ್ಬಿಟ್ಟಿ.. ಬಂದ್ಬಿಟ್ಟಿ.. ಎಂದೆಲ್ಲ ಬಳಸ್ತಾರೆ. ನನಗೆ ನಿರ್ದೇಶಕರು ಹಾಗೆಲ್ಲ ಮಾಡಿಲ್ಲ. ಮುಸ್ಲಿಮರಲ್ಲೂ ಚೆಂದದ ಕನ್ನಡ ಮಾತನಾಡುವವರಿದ್ದಾರೆ. ಅದೇ ರೀತಿ ಸ್ವಚ್ಛವಾದ ಕನ್ನಡದಲ್ಲೇ ಸಂಭಾಷಣೆ ಹೇಳೋಕೆ ಅವಕಾಶ ಕೊಟ್ಟಿದ್ದಾರೆ ಎಂದು ಥ್ರಿಲ್ ಆಗಿದ್ದು ಆದಿತಿ ಪ್ರಭುದೇವ.
ವಿಜಯ್ ಪ್ರಸಾದ್ ನಿರ್ದೇಶನದ ತೋತಾಪುರಿ