` ಗಜರಾಮನಿಗೆ ತಪಸ್ವಿನಿ - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
ಗಜರಾಮನಿಗೆ ತಪಸ್ವಿನಿ
Rajavardhan, Tapaswini Image

ಗಜರಾಮ. ಬಿಚ್ಚುಗತ್ತಿ ರಾಜವರ್ಧನ್ ನಟಿಸುತ್ತಿರೋ ಸಿನಿಮಾ. ಯೋಗರಾಜ್ ಭಟ್, ದುನಿಯಾ ಸೂರಿಯಂತಹವರ ಜೊತೆ ಕೆಲಸ ಮಾಡಿದ್ದ ಸುನಿಲ್ ಕುಮಾರ್ ನಿರ್ದೇಶಿಸುತ್ತಿರೋ ಪ್ರಥಮ ಸಿನಿಮಾ. ಲೈಫ್ ಲೈನ್ ಫಿಲ್ಮ್ ಮೂಲಕ ನರಸಿಂಹ ಮೂರ್ತಿ ನಿರ್ಮಾಣ ಮಾಡುತ್ತಿರೋ ಸಿನಿಮಾ ಗಜರಾಮ. ಚಿತ್ರದ ಫಸ್ಟ್ ಲುಕ್ ರಿಲೀಸ್ ಆಗಿದೆ. ಕಮರ್ಷಿಯಲ್ ಸಿನಿಮಾ ಅನ್ನೋ ಸುಳಿವಂತೂ ಸಿಕ್ಕಿದೆ.

ಚಿತ್ರಕ್ಕೆ ಮನೋಮೂರ್ತಿ ಸಂಗೀತವಿದೆ. ಜಯಂತ್ ಕಾಯ್ಕಿಣಿ, ಚಿನ್ಮಯ್ ಭಾವಿಕೆರೆ ಸಾಹಿತ್ಯ ಬರೆಯುತ್ತಿದ್ದಾರೆ. ಚಿತ್ರಕ್ಕೀಗ ನಾಯಕಿಯಾಗಿ ಬಂದಿರೋದು ಹರಿಕಥೆ ಸುಂದರಿ ತಪಸ್ವಿನಿ ಪೂಣಚ್ಚ. ಕೊಡಗಿನ ಕುವರಿ.

ಈ ಚಿತ್ರದಲ್ಲಿ ಹಳ್ಳಿ ಹುಡುಗಿಯ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದೇನೆ ಎನ್ನುವ ತಪಸ್ವಿನಿ ಹರಿಕಥೆ ಅಲ್ಲ ಗಿರಿಕಥೆ ನಂತರ ಹಲವು ಅವಕಾಶಗಳು ಬರುತ್ತಿವೆ. ಅವುಗಳಲ್ಲಿ ಈ ಪಾತ್ರ ಇಷ್ಟವಾಗಿ ಒಪ್ಪಿಕೊಂಡೆ ಎಂದಿದ್ದಾರೆ.