` ರಾಜಾಜಿನಗರದ ಮನೆ ಬಿಟ್ಟ ರವಿಚಂದ್ರನ್ : ಜ್ಯೋತಿಷಿಗಳು ಕಾರಣವಾ? - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
ರಾಜಾಜಿನಗರದ ಮನೆ ಬಿಟ್ಟ ರವಿಚಂದ್ರನ್ : ಜ್ಯೋತಿಷಿಗಳು ಕಾರಣವಾ?
Ravichandran Image

ಕ್ರೇಜಿಸ್ಟಾರ್ ರವಿಚಂದ್ರನ್ ತಮ್ಮ ಹುಟ್ಟಿದ ದಿನಗಳಿಂದ ಇದ್ದ ರಾಜಾಜಿನಗರದ ಮನೆಯನ್ನು ಬಿಟ್ಟು ಹೊರಟಿದ್ದಾರೆ. ಇನ್ನು ಮುಂದೆ ಅವರ ನಿವಾಸ ಹೊಸಕೆರೆ ಹಳ್ಳಿಯಲ್ಲಿರೋ ಹೊಸ ಮನೆಯಲ್ಲಿ. ರಾಜಾಜಿನಗರದ ಮನೆಯಲ್ಲಿ ಕೆಲವು ವಾಸ್ತುಸಮಸ್ಯೆಗಳಿದ್ದು ಅವುಗಳ ಪರಿವರ್ತನೆ ಮಾಡಲಾಗುತ್ತಿದೆ ಎನ್ನುವುದು ಒಂದು ವಾದ. ಹಾಗೇನಿಲ್ಲ.. ಮನೆ ನವೀಕರಣ ಮಾಡಬೇಕು ಎಂಬುದಷ್ಟೇ ಕಾರಣ ಎನ್ನುವುದು ಇನ್ನೊಂದು ವಾದ. ಇತ್ತೀಚೆಗೆ ತಮ್ಮ ವಿ. ರವಿಚಂದ್ರನ್ ಎಂಬ ಹೆಸರನ್ನು ರವಿಚಂದ್ರ ವಿ. ಎಂದು ಬರೆಯುತ್ತಿದ್ದುದನ್ನು ನೋಡಿದವರಿಗೆ ಯಾವುದು ನಿಜವಿರಬಹುದು ಎಂದು ಊಹಿಸುವುದು ಕಷ್ಟವಲ್ಲ.

ರವಿಚಂದ್ರನ್ ಅವರಿಗೆ ಈ ಮನೆ ನಿಮಗೆ ಆಗಿ ಬರುತ್ತಿಲ್ಲ. ಬೇರೆ ಮನೆಗೆ ಹೋಗಿ. ನಿಮ್ಮ ಜೀವನಶೈಲಿಯೇ ಬದಲಾಗುತ್ತೆ ಎಂದು ಜ್ಯೋತಿಷಿಗಳು ಸಲಹೆ ಕೊಟ್ಟಿದ್ದಾರಂತೆ. ಅಂತೆ.. ಈಗ ರಿನೋವೇಷನ್ ಆದ ಮೇಲೆ ರವಿಚಂದ್ರನ್ ಪುನಃ ಇಲ್ಲಿಗೇ ವಾಪಸ್ ಬರ್ತಾರಾ? ಕಾದು ನೋಡಬೇಕು.

ಹಾಗಂತ.. ರಾಜಾಜಿನಗರದ ಮನೆ ಕೆಟ್ಟದ್ದೇನನ್ನೂ ಮಾಡಿಲ್ಲ. ಸುಂದರ ನೆನಪುಗಳೂ ಅಲ್ಲಿವೆ. ರವಿಚಂದ್ರನ್‍ರ ಮಗಳು ಮತ್ತು ಮಗನ ಮದುವೆಯ ನೆನಪು ಅಲ್ಲಿದೆ. ತಂದೆ, ತಾಯಿಯ ನೆನಪೂ ಇದೇ ಮನೆಯಲ್ಲಿದೆ. ಅದ್ಭುತ ಗೆಲುವು ಮತ್ತು ಅದ್ಭುತ ಸೋಲು ಎರಡಕ್ಕೂ ಸಾಕ್ಷಿಯಾಗಿದೆ ಅಮ್ಮನ ಮನೆ. ಅಮ್ಮನ ಮನೆ ಎನ್ನುವುದು ರವಿಚಂದ್ರನ್ ಮನೆಯ ಹೆಸರು.