` ಡಾನ್ ಡಾಲಿ ಪರ ಜಯರಾಜ್ ಸೋದರಿ.. ವಿರುದ್ಧ ಸೊಸೆ : ಹೆಡ್ ಬುಷ್ ಜೂಟಾಟ - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
ಡಾನ್ ಡಾಲಿ ಪರ ಜಯರಾಜ್ ಸೋದರಿ.. ವಿರುದ್ಧ ಸೊಸೆ : ಹೆಡ್ ಬುಷ್ ಜೂಟಾಟ
Head Bush Movie Image

ಡಾಲಿ ಧನಂಜಯ್ ನಟಿಸಿ ನಿರ್ಮಿಸುತ್ತಿರುವ ಸಿನಿಮಾ ಹೆಡ್ ಬುಷ್. ಇದು ಅಂಡರ್‍ವಲ್ರ್ಡ್ ಕಥೆಯಾಗಿದ್ದು ಡಾನ್ ಜಯರಾಜನ ಪಾತ್ರದಲ್ಲಿ ಡಾಲಿ ನಟಿಸಿದ್ದಾರೆ. ಇತ್ತೀಚೆಗೆ ಡಾಲಿ ಧನಂಜಯ್ ಡಾನ್ ಜಯರಾಜ್ ಗೆಟಪ್ಪಿನಲ್ಲಿ ದುಬೈಗೆ ಹೊರಡುವ ದೃಶ್ಯದ ಪುಟ್ಟದೊಂದು ವಿಡಿಯೋ ಹಾಕಿದ್ದರು. ಡಾನ್ ಪಾತ್ರದಲ್ಲಿ ಪರಕಾಯ ಪ್ರವೇಶ ಮಾಡಿರುವ ಧನಂಜಯ್ ಬಗ್ಗೆ ಫ್ಯಾನ್ಸ್ ಥ್ರಿಲ್ಲಾದರೆ.. ಜಯರಾಜನ ಫ್ಯಾಮಿಲಿಯಲ್ಲಿ ಪರ ವಿರೋಧ ಮಾತುಗಳು ಶುರುವಾಗಿವೆ.

ಚಿತ್ರ ಶುರುವಾದಾಗ ಚಿತ್ರದ ಬಗ್ಗೆ ಪಾಸಿಟಿವ್ ಆಗಿಯೇ ಇದ್ದರು ಎನ್ನಲಾಗಿದ್ದ ಜಯರಾಜ್ ಪುತ್ರ ಅಜಿತ್ ಚಿತ್ರವನ್ನು ವಿರೋಧಿಸಿದ್ದರು. ಈಗ ಈ ವಿಡಿಯೋ ರಿಲೀಸ್ ಆದ ಮೇಲೆ ಜಯರಾಜ್ ಸೊಸೆ ಅಂದ್ರೆ ಅಜಿತ್ ಅವರ ಪತ್ನಿ ಪರೋಕ್ಷವಾಗಿ ಟಾಂಗ್ ಕೊಟ್ಟಿದ್ದಾರೆ.

ರಾಜ ಯಾವಾಗಲೂ ರಾಜನಾಗಿಯೇ ಇರುತ್ತಾನೆ. ಕೆಲವರು ನಿಮ್ಮ ರೀತಿ ಆಗಲು ಹೋಗಿ ಸೋಲುತ್ತಾರೆ. ನಿಮ್ಮ ಅಜಿತ್ ನಿಮ್ಮನ್ನು ಎಂದಿಗೂ ಸೋಲೋಕೆ ಬಿಡೋದಿಲ್ಲ ಎಂಬ ಸ್ಟೇಟಸ್ ಹಾಕಿದ್ದಾರೆ ಇಂಪನಾ ಅಜಿತ್. ಇಂಪನಾ ಜಯರಾಜ್ ಅವರ ಮಗ ಅಜಿತ್ ಅವರ ಪತ್ನಿ.

ಆದರೆ.. ಅಜಿತ್ ಅವರ ಸೋದರಿ ಹೇಮಾವತಿ ಹೇಳೋದೇ ಬೇರೆ. ಹೆಡ್ ಬುಷ್ ಮಾಡುತ್ತಿರುವವರು ನನ್ನ ಸೋದರರು. ನನ್ನ ಅಣ್ಣನ ವ್ಯಕ್ತಿತ್ವ ಹೇಳುವುದು ನನ್ನ ಸೋದರರು. ಚಿತ್ರ ತಂಡಕ್ಕೆ ಒಳ್ಳೆಯದಾಗಲಿ ಎಂದಿದ್ದಾರೆ ಹೇಮಾವತಿ.

ಅಂದಹಾಗೆ ಚಿತ್ರವನ್ನು ಡಾಲಿ ಧನಂಜಯ್ ಅವರೇ ನಿರ್ಮಿಸುತ್ತಿದ್ದಾರೆ. ಡಾಲಿ ಜೊತೆಗೆ ವಸಿಷ್ಠ ಸಿಂಹ, ಲೂಸ್ ಮಾದ ಯೋಗಿ, ದೇವರಾಜ್, ರಘು ಮುಖರ್ಜಿ.. ಅಲ್ಲದೆ ಅತಿಥಿ ನಟರಾಗಿ ವಿ.ರವಿಚಂದ್ರನ್ ನಟಿಸುತ್ತಿದ್ದಾರೆ. ಅಗ್ನಿ ಶ್ರೀಧರ್ ಕಥೆ-ಚಿತ್ರಕಥೆ ಬರೆದಿದ್ದು ಶೂನ್ಯ ಡೈರೆಕ್ಟರ್. ಅಕ್ಟೋಬರ್ 21ಕ್ಕೆ ಸಿನಿಮಾ ರಿಲೀಸ್ ಆಗಲಿದೆ