ಕೆಲವೊಂದು ನಲ್ಲಿಯಲ್ಲಿ ನೀರು ಜೋರಾಗಿ ಬರುತ್ತೆ. ಕೆಲವೊಂದರಲ್ಲಿ ಬರಲ್ಲ. ನಿಮ್ಮ ನಲ್ಲಿ ಹೇಗೆ.. ಎನ್ನುವ ಡೈಲಾಗ್ ನೆನಪಿದೆಯಾ? ತೋತಾಪುರಿ ಚಿತ್ರದ ಆ ಡೈಲಾಗ್ ಹೇಳೋದು ಆದಿತಿ ಪ್ರಭುದೇವ ಅನ್ನೋ ಟೀಚರ್ ಕ್ಯಾರೆಕ್ಟರ್.
ತೋತಾಪುರಿ ಚಿತ್ರದ ಟ್ರೇಲರ್ ನೋಡಿದವರಿಗೆ ಅದು ಡಬಲ್ ಮೀನಿಂಗೋ.. ಸಿಂಗಲ್ ಮೀನಿಂಗೋ.. ಡೈರೆಕ್ಟ್ ಮೀನಿಂಗೋ.. ಅರ್ಥವಾಗಲ್ಲ. ಆದರೆ.. ಆದಿತಿ ಹೇಳೋದೇ ಬೇರೆ.
ಈ ಸಿನಿಮಾದಲ್ಲಿ ನನ್ನ ಪಾತ್ರಕ್ಕೆ ಅಷ್ಟಾಗಿ ಡಬಲ್ ಮೀನಿಂಗ್ ಡೈಲಾಗ್ಸ್ ಇಲ್ಲ. ಎಲ್ಲೋ ಮೂರ್ನಾಲ್ಕು ಕಡೆ ಬರುತ್ತದಷ್ಟೇ. ಬೇರೆ ಪಾತ್ರಗಳು ನಲ್ಲಿ, ಮೂಳೆ ಅಂತೆಲ್ಲ ಮಾತನಾಡ್ತಿರೋವಾಗ.. ಅದು ಏನು ಎಂದು ಅರ್ಥ ಮಾಡಿಕೊಂಡು ನಾನೂ ಹಾಗೆ ಮಾತನಾಡಬಹುದಾ ಎಂದೆಲ್ಲ ಯೋಚಿಸುವ ಹೊತ್ತಿಗೆ ಶೂಟಿಂಗೇ ಮುಗಿದು ಹೋಯ್ತು ಎನ್ನುತ್ತಾರೆ ಆದಿತಿ ಪ್ರಭುದೇವ.
ಟ್ರೇಲರ್ ನೋಡಿದವರು ಕೆಲವರು ಮೆಚ್ಚಿದ್ದಾರೆ. ಕೆಲವರು ಹೀಗಳೆದೂ ಇದ್ದಾರೆ. ಎರಡನ್ನೂ ಸ್ವೀಕರಿಸಬೇಕು ಎನ್ನುವ ಆದಿತಿಗೆ ಜಗ್ಗೇಶ್ ಜೊತೆ ನಟಿಸಿದ ಖುಷಿ ಇದೆ. ವಿಜಯ್ ಪ್ರಸಾದ್ ನಿರ್ದೇಶನದಲ್ಲಿ ಒಳ್ಳೆಯ ಸಿನಿಮಾ. ಧರ್ಮ, ಜಾತಿ ಅನ್ನೋದನ್ನೆಲ್ಲ ಮೀರಿ ನಾವೆಲ್ಲ ಒಳ್ಳೆಯ ಮನುಷ್ಯರು ಎಂದು ಹೇಳೋ ಪ್ರಯತ್ನ ಚಿತ್ರದಲ್ಲಿದೆಯಂತೆ. ತೋತಾಪುರಿ ಸೆಪ್ಟೆಂಬರ್ 30ಕ್ಕೆ ರಿಲೀಸ್ ಆಗುತ್ತಿದೆ.