ಕಬ್ಜ ಚಿತ್ರದ ಟೀಸರ್ ಹಿಟ್ ಆಗಿದೆ. ಎರಡೂವರೆ ಕೋಟಿಗೂ ಹೆಚ್ಚು ಜನ ಟೀಸರ್ ನೋಡಿದ್ದಾರೆ. ಮೆಚ್ಚಿದ್ದಾರೆ. ತೆಲುಗಿನಲ್ಲಂತೂ 50ಕ್ಕೂ ಹೆಚ್ಚು ಫೋನ್ ಬಂದಿದ್ದು ಮಾರ್ಕೆಟಿಂಗ್ ಬಗ್ಗೆ ಮಾತನಾಡುತ್ತಿದ್ದಾರಂತೆ. ಬಿಸಿನೆಸ್ ಶುರುವಾಗಿದೆಯಂತೆ. ವಿದೇಶದಿಂದಲೂ ಚಿತ್ರದ ಬಗ್ಗೆ ಪಾಸಿಟಿವ್ ರೆಸ್ಪಾನ್ಸ್ ಇದೆ ಎಂದು ಶ್ರೀಕಾಂತ್ ಹೇಳುತ್ತಿದ್ದರೆ.. ನಿರ್ದೇಶಕ ಆರ್.ಚಂದ್ರು ಮುಖದಲ್ಲಿ ಗೆಲುವಿನ ಹುಮ್ಮಸ್ಸಿತ್ತು.
ಈ ಚಿತ್ರಕ್ಕೆ ವ್ಯಕ್ತವಾದ ಪ್ರತಿಕ್ರಿಯೆ ಯುಐ ಚಿತ್ರದ ಮೇಕಿಂಗ್‍ನ್ನು ಯೋಚಿಸುವಂತೆ ಮಾಡಿದೆ ಎಂದ ಉಪ್ಪಿ ಒಂದು ಕಥೆ ಹೇಳಿದರು. ಒಂದೂರಲ್ಲಿ ಒಬ್ಬ ಆರ್ಟಿಸ್ಟ್ ಇದ್ದ. ಅವನ ಕಲಾಕೃತಿಯನ್ನು ನೋಡಿದವನೊಬ್ಬ ಮೆಚ್ಚಿಕೊಂಡು ಈ ಕಲಾಕೃತಿ ಯಾವಾಗ ಮುಗಿಯುತ್ತೆ ಎಂದು ಕೇಳಿದ. ಇದು ಮುಗಿಯೋದಿಲ್ಲ. ಇವತ್ತೇ ತೆಗೆದುಕೊಂಡುಹೋಗಬಹುದು ಎಂದ ಕಲಾವಿದರ. ಆರ್.ಚಂದ್ರು ಕೂಡಾ ಹಾಗೆಯೇ. ಅವರ ಕೆಲಸ ಮುಗಿಯೋದಿಲ್ಲ. ಆದರೆ ಅಂದುಕೊಂಡಿದ್ದನ್ನು ಮಾಡಿ ತೋರಿಸುತ್ತಾರೆ ಎಂದು ಮೆಚ್ಚಿದರು.
ಕೆಜಿಎಫ್ ಚಿತ್ರವನ್ನು ನೋಡಿದ ನಂತರ ವ್ಹಾವ್.. ಅದ್ಭುತ ಸಿನಿಮಾ ಎನ್ನಿಸಿತು. ಮಾಡಿದರೆ ಕೆಜಿಎಫ್ ರೀತಿ ಸಿನಿಮಾ ಮಾಡಬೇಕು ಎನ್ನಿಸಿತು. ಕಬ್ಬ ಮಾಡಿದ್ದೇನೆ. ದಯವಿಟ್ಟು ಕಬ್ಜವನ್ನು ಕೆಜಿಎಫ್ ಜೊತೆ ಹೋಲಿಕೆ ಮಾಡಬೇಡಿ. ಮೊದಲು ಚಿತ್ರವನ್ನು ನೋಡಿ ಡಿಸೈಡ್ ಮಾಡಿ ಎಂದು ಮನವಿ ಮಾಡಿದರು ಆರ್.ಚಂದ್ರು.