` ಪೊನ್ನಿಯನ್ ಸೆಲ್ವನ್ ಈವೆಂಟ್ ಬೆಂಗಳೂರಿನಲ್ಲಿ : ಆದರೆ.. ಯಾರಿಗೆ ಲಾಭ? - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
ಪೊನ್ನಿಯನ್ ಸೆಲ್ವನ್ ಈವೆಂಟ್ ಬೆಂಗಳೂರಿನಲ್ಲಿ : ಆದರೆ.. ಯಾರಿಗೆ ಲಾಭ?
Ponniyan Selvan Image

ಪೊನ್ನಿಯನ್ ಸೆಲ್ವನ್. ಮಣಿರತ್ನಂ ನಿರ್ದೇಶನದ ಪ್ಯಾನ್ ಇಂಡಿಯಾ ಸಿನಿಮಾ. ಐಶ್ವರ್ಯಾ ರೈ, ತ್ರಿಷಾ,  ವಿಕ್ರಂ, ಕಾರ್ತಿ, ಜಯಂ ರವಿ, ಪ್ರಕಾಶ್ ರೈ, ಕಿಶೋರ್.. ಹೀಗೆ ಘಟಾನುಘಟಿ ಕಲಾವಿದರೇ ಇರುವ ಸಿನಿಮಾ. ಎ.ಆರ್.ರೆಹಮಾನ್ ಮ್ಯೂಸಿಕ್ ಇದೆ. ಚಿತ್ರದ ಬಗ್ಗೆ ಎಲ್ಲೆಡೆಯೂ ಟಾಕ್ ಇದೆ. ಚಿತ್ರ ಸೆಪ್ಟೆಂಬರ್ 30ಕ್ಕೆ ರಿಲೀಸ್ ಆಗುತ್ತಿದೆ. ಇದೀಗ ಚಿತ್ರತಂಡ ಬೆಂಗಳೂರಿನಲ್ಲಿ ಪ್ರೆಸ್ ಮೀಟ್ ಮಾಡಿದೆ.

ಅಫ್‍ಕೋರ್ಸ್.. ಚಿತ್ರದ ಪ್ರಚಾರವನ್ನೇನೋ ಮಾಡುತ್ತಿದ್ದಾರೆ. ಎಲ್ಲ ಚಿತ್ರತಂಡಗಳ ಸ್ಟಾರ್‍ಗಳೂ ಬೆಂಗಳೂರಿಗೆ ಬರುತ್ತಿದ್ದಾರೆ. ಕನ್ನಡದ ಸಿನಿಮಾಗಳೂ ಬೇರೆ ಭಾಷೆಗೆ ಹೋಗುತ್ತಿವೆ. ಆದರೆ.. ಬಿಸಿನೆಸ್. ಬಂದವರೆಲ್ಲ ಬಿಸಿನೆಸ್ ಪಡೆಯುತ್ತಿದ್ದಾರೆಯೇ ಹೊರತು.. ಕೊಡುವ ಮನಸ್ಸು ಮಾಡಿಲ್ಲ. ಆದರೆ.. ಅದೇ ಮಾತು ಕನ್ನಡದ ಚಿತ್ರಗಳು ಬೇರೆ ಭಾಷೆಗೆ ಹೋದಾಗ ಅನ್ವಯವಾಗಲ್ಲ.

ಕೆಜಿಎಫ್, ವಿಕ್ರಾಂತ್ ರೋಣ, 777 ಚಾರ್ಲಿ.. ಮೊದಲಾದ ಚಿತ್ರಗಳು ಪರಭಾಷೆಗೆ ಹೋದವಲ್ಲ. ಅವರು ಕೇವಲ ಅಲ್ಲಿ ಪ್ರೆಸ್ ಮೀಟ್ ಮಾಡಿ ಎದ್ದು ಬರಲಿಲ್ಲ. ಸ್ಥಳೀಯರಿಗೆ ಬಿಸಿನೆಸ್ ಕೊಟ್ಟು ಪ್ರಚಾರ ಮಾಡಿದರು. ಸ್ಥಳೀಯ ಮಾಧ್ಯಮ, ಪತ್ರಿಕೆ, ವೆಬ್ ಸೈಟ್, ಟಿವಿಗಳಲ್ಲಿ ಸಂದರ್ಶನ ಕೊಟ್ಟು ಪ್ರಚಾರವನ್ನು ಪಡೆದುಕೊಂಡರು. ಯೆಸ್.. ಪಡೆದುಕೊಂಡರು.

ಅದೇ ಮಾಡೆಲ್ ಕನ್ನಡ ಮಾಧ್ಯಮಗಳಿಗೆ ಅನ್ವಯವಾಗುತ್ತಿಲ್ಲ. ಇತ್ತೀಚೆಗೆ ಆರ್.ಆರ್.ಆರ್., ಪುಷ್ಪ, ವಿಕ್ರಂ, 83, ಬ್ರಹ್ಮಾಸ್ತ್ರ, ಗಾರ್ಗಿ, ಆಚಾರ್ಯ, ಲೈಗರ್.. ಹೀಗೆ ಹಲವು ಚಿತ್ರಗಳು ಕನ್ನಡಕ್ಕೆ ಬಂದಿವೆ. ಕರ್ನಾಟಕಕ್ಕೆ ಸ್ಟಾರ್‍ಗಳೂ ಬಂದಿದ್ದಾರೆ. ಆದರೆ.. ಅವರು ನಿರೀಕ್ಷಿಸುತ್ತಿರುವ ರೀತಿಯೇ ಬೇರೆ ಇದೆ.

ಕನ್ನಡಕ್ಕೆ ನಾವು ಬರುತ್ತಿರುವುದೇ ನಿಮ್ಮ ಅದೃಷ್ಟ. ನಾವು ಮಾತನಾಡಿದ್ದೆಕ್ಕೆ ನೀವು ಕೇಳಬೇಕು. ನೋಡಬೇಕು.. ಎಂಬ ರೀತಿಯಲ್ಲಿದೆ. ಕನ್ನಡ ಮಾಧ್ಯಮಕ್ಕೆ ಸಂದರ್ಶನಗಳನ್ನಾಗಲೀ.. ಪ್ರಚಾರವನ್ನಾಗಲೀ.. ಕೊಡುವ ಕೆಲಸ ಮಾಡುತ್ತಿಲ್ಲ.

ಇದು ಕೇವಲ ಪೊನ್ನಿಯನ್ ಸೆಲ್ವನ್ ಕಥೆಯಲ್ಲ. ಎಲ್ಲ ಪ್ಯಾನ್ಸ್ ಇಂಡಿಯಾ ಸಿನಿಮಾಗಳೂ ಇದೇ ರೀತಿ ಆಗುತ್ತಿವೆ. ಎಚ್ಚೆತ್ತುಕೊಳ್ಳಬೇಕಾದ ಸಮಯ ಚಿತ್ರರಂಗದ್ದಷ್ಟೇ ಅಲ್ಲ..