ಕ್ರೇಜಿ ಕ್ವೀನ್ ರಕ್ಷಿತಾ ತಮ್ಮ ರಾಣಾ ಹೊಸ ಚಿತ್ರಕ್ಕೆ ಓಕೆ ಎಂದಿದ್ದಾರೆ. ಏಕ್ ಲವ್ ಯಾ ಚಿತ್ರದಲ್ಲಿ ತುಂಟ ಪ್ರೇಮಿ, ಭಗ್ನ ಪ್ರೇಮಿ, ಸೇಡಿನ ಪ್ರೇಮಿ.. ಹೀಗೆ ವಿವಿಧ ಶೇಡ್‍ಗಳಲ್ಲಿ ಮಿಂಚಿ ಭರವಸೆ ಮೂಡಿಸಿದ್ದ ರಾಣಾ 2ನೇ ಚಿತ್ರಕ್ಕೆ ಓಕೆ ಎಂದಿದ್ದಾರೆ.
ಜೋಗಿ ಪ್ರೇಮ್ ಜೊತೆಯಲ್ಲೇ ಕೆಲಸ ಮಾಡುತ್ತಿದ್ದ ವಿಜಯ್ ಈಶ್ವರ್ ಈ ಚಿತ್ರಕ್ಕೆ ನಿರ್ದೇಶಕ. ಹಲವು ಚಿತ್ರಗಳಿಗೆ ಸಹಾಯಕ ನಿರ್ದೇಶಕರಾಗಿದ್ದ ವಿಜಯ್ ಈಶ್ವರ್ ಈ ಚಿತ್ರದ ಮೂಲಕ ನಿರ್ದೇಶಕರಾಗುತ್ತಿದ್ದಾರೆ.
ವಿಜಯ್ ಈಶ್ವರ್ ಹೇಳಿರುವ ಕಥೆ ರಾಣಾಗೆ ಥ್ರಿಲ್ ಕೊಟ್ಟಿದೆಯಂತೆ. ಪ್ರೇಮ್ ಮತ್ತು ರಕ್ಷಿತಾ ಅವರಿಗೂ ಕಥೆ ಇಷ್ಟವಾಗಿದ್ದು ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ. ಶೀಘ್ರದಲ್ಲೇ ಚಿತ್ರದ ಒಂದಿಷ್ಟು ಮಾಹಿತಿಗಳು ಹೊರಬೀಳಲಿವೆ.