ಸೈಮಾ ಅವಾರ್ಡ್ 2022ನೇ ಸಾಲಿನ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಬೆಂಗಳೂರಿನಲ್ಲೇ ಆಯೋಜಿಸಿತ್ತು. ಅಪ್ಪು ಅವರ ನೆನಪಿಗಾಗಿ ನಡೆದ ಸಮಾರಂಭ ಅದ್ಧೂರಿಯಾಗಿಯೇ ನಡೆದಿತ್ತು. ಪ್ರತಿಷ್ಠಿತ ಸ್ಟಾರ್ ಹೋಟೆಲೊಂದರಲ್ಲಿ ನಡೆದ ಕಾರ್ಯಕ್ರಮದಲ್ಲಿ ವೈರಲ್ ಆದ ವಿಡಿಯೋಗಳನ್ನು ನೋಡಿರುತ್ತೀರಿ. ಖುಷಿ ಪಟ್ಟಿರುತ್ತೀರಿ. ಇಡೀ ಕಾರ್ಯಕ್ರಮ ಕೆಲವೇ ದಿನಗಳಲ್ಲಿ ಟಿವಿಗಳಲ್ಲಿಯೂ ಪ್ರಸಾರವಾಗಲಿದೆ. ಆದರೆ ವಿವಾದ ಅದಲ್ಲ.
ಅವಾರ್ಡ್ ಕಾರ್ಯಕ್ರಮ ಮುಗಿದ ಮೇಲೆ ಎಲ್ಲ ಸೆಲಬ್ರಿಟಿಗಳೂ ಪಾರ್ಟಿ ಮಾಡಿದ್ದಾರೆ.ಸೈಮಾದವರೇ ಪಾರ್ಟಿ ಆಯೋಜನೆ ಮಾಡಿದ್ದಾರೆ. ಆದರೆ.. ಪಾರ್ಟಿ ಮಧ್ಯರಾತ್ರಿ 3.30ರವರೆಗೂ ಬೆಳೆದಿದೆ.
ಬೆಂಗಳೂರಿನಲ್ಲಿ ಕೆಲವು ನಿಯಮಗಳಿವೆ. ಮಧ್ಯರಾತ್ರಿಯೊಳಗೆ ಪಾರ್ಟಿ ಮುಗಿಸಬೇಕು. ವಿಠ್ಠಲ್ ಮಲ್ಯ ರಸ್ತೆಯಲ್ಲಿರೋ ಈ ಐಷಾರಾಮಿ ಹೋಟೆಲ್ಲಿಗೆ ಪೊಲೀಸರು ಭೇಟಿಯನ್ನೂ ಕೊಟ್ಟು 1 ಗಂಟೆಯೊಳಗೆ ಪಾರ್ಟಿ ಮುಗಿಸಲು ಸೂಚಿಸಿದ್ದರು. ಯಶ್, ಅಭಿಷೇಕ್ ಅಂಬರೀಷ್ , ಅಲ್ಲು ಅರ್ಜುನ್ ಸೇರಿದಂತೆ ಕನ್ನಡ ಚಿತ್ರರಂಗದ ತಾರೆಯರೂ ಭಾಗವಹಿಸಿದ್ದ ಪಾರ್ಟಿಯದು. ಆದರೆ ಮೂರೂವರೆಯಾದರೂ ಪಾರ್ಟಿ ಮುಗಿಸಿಲ್ಲ. ಈ ಕುರಿತಂತೆ ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದೆ.