ಪೆಂಗ್ವಿನ್ ಅನ್ನೋ ಒಂದು ಸಿನಿಮಾ 2020ರಲ್ಲಿ ರಿಲೀಸ್ ಆಗಿತ್ತು. ಕೋವಿಡ್‍ನಿಂದಾಗಿ ಆನ್ ಲೈನ್‍ನಲ್ಲೇ ರಿಲೀಸ್ ಆದ ಸಿನಿಮಾ ಪ್ರೇಕ್ಷಕರಿಗೆ ಥ್ರಿಲ್ ಕೊಟ್ಟಿತ್ತು. ಕೀರ್ತಿ ಸುರೇಶ್ ನಟಿಸಿದ್ದ ಸಿನಿಮಾಗೆ ನಿರ್ದೇಶಕರಾಗಿದ್ದವರು ಈಶ್ವರ್ ಕಾರ್ತಿಕ್. ಅದೇ ಈಶ್ವರ್ ಕಾರ್ತಿಕ್, ಈಗ ಡಾಲಿ ಜೊತೆ ಸಿನಿಮಾ ಮಾಡಲು ಉತ್ಸುಕರಾಗಿದ್ದಾರೆ. ಡಾಲಿ ಧನಂಜಯ್ 26ನೇ ಸಿನಿಮಾಗೆ ಯೆಸ್ ಎಂದಿದ್ದಾರೆ.
ಬಾಲ ಸುಂದರಂ ಮತ್ತು ದಿನೇಶ್ ಸುಂದರಂ ಈ ಚಿತ್ರದ ನಿರ್ಮಾಪಕರು. ತೆಲುಗಿನಲ್ಲಿ ತಯಾರಾಗಲಿರುವ ಚಿತ್ರ ಕನ್ನಡದಲ್ಲೂ ಬರಲಿದೆ. ತೆಲುಗಿನಲ್ಲಿ ಪುಷ್ಪದ ಜಾಲಿ ರೆಡ್ಡಿ ಸಕ್ಸಸ್ ಆದ ನಂತರ ಡಾಲಿಗೆ ತೆಲುಗಿನಲ್ಲಿ ಒಳ್ಳೆಯ ಮಾರ್ಕೆಟ್ ಇದೆ. ಇದೆಲ್ಲವನ್ನೂ ಗಮನದಲ್ಲಿಟ್ಟುಕೊಂಡೇ ಡಾಲಿಗೆ ಸಿನಿಮಾ ಮಾಡುತ್ತಿದ್ದಾರೆ.
ಹೊಯ್ಸಳ ಚಿತ್ರದ ಶೂಟಿಂಗಿನಲ್ಲಿ ಬಂದು ಚಿತ್ರದ ಕಥೆ ಹೇಳಿದರು. ಆ್ಯಕ್ಷನ್ ಹಿನ್ನೆಲೆಯಿರುವ ಕ್ರೈಂ ಸಿನಿಮಾ ಎಂದಿದ್ದಾರೆ ಡಾಲಿ.
ಸದ್ಯಕ್ಕೆ ಡಾಲಿ ಸಿನಿಮಾ ಕ್ಯೂನಲ್ಲಿವೆ. ತೋತಾಪುರಿ ಈ ತಿಂಗಳ ಕೊನೆಯಲ್ಲಿ ರಿಲೀಸ್ ಆಗುತ್ತಿದೆ. ಒನ್ಸ್ ಅಪಾನ್ ಎ ಟೈಂ ಇನ್ ಜಮಾಲಿಗುಡ್ಡ, ಹೆಡ್ ಬುಷ್, ಹೊಯ್ಸಳ ಚಿತ್ರಗಳು ಸಿದ್ಧವಾಗುತ್ತಿವೆ.