ಮರಿ ಟೈಗರ್ ವಿನೋದ್ ಪ್ರಭಾಕರ್ ನಟಿಸುತ್ತಿರುವ ಮಾದೇವ ಚಿತ್ರದ ಚಿತ್ರೀಕರಣ ಭರದಿಂದ ಸಾಗುತ್ತಿದೆ. ವಿನೋದ್ ಪ್ರಭಾಕರ್ ಜೊತೆಗೆ ಸೋನಲ್ ಮಂಥೆರೋ ಜೋಡಿ. ರಾಬರ್ಟ್ ನಂತರ ಮತ್ತೊಮ್ಮೆ ತನು-ರಾಘವ್ ಸಕ್ಸಸ್ ಫುಲ್ ಜೋಡಿ ಒಂದಾಗಿರುವ ಚಿತ್ರ ಮಾದೇವ. ಆ ಚಿತ್ರಕ್ಕೀಗ ವಿಲನ್ ಎಂಟ್ರಿ ಕೊಟ್ಟಿದ್ದಾರೆ. ಶ್ರೀನಗರ ಕಿಟ್ಟಿ.
ತುಸು ಗ್ಯಾಪ್ ನಂತರ ಅವತಾರ ಪುರುಷ ಚಿತ್ರದ ವಿಭಿನ್ನ ಪಾತ್ರದ ಮೂಲಕ ಎಂಟ್ರಿ ಕೊಟ್ಟಿದ್ದ ಶ್ರೀನಗರ ಕಿಟ್ಟಿ, ಗೌಳಿಯಲ್ಲಂತೂ ಮೋಡಿ ಮಾಡುತ್ತಿದ್ದಾರೆ. ವೀರಂ ಚಿತ್ರದಲ್ಲೂ ನಟಿಸುತ್ತಿರೋ ಶ್ರೀನಗರ ಕಿಟ್ಟಿ, ಮಾದೇವ ಚಿತ್ರದ ವಿಲನ್ ಆಗಿದ್ದಾರೆ.
ನವೀನ್ ರೆಡ್ಡಿ ನಿರ್ದೇಶನದ ಸಿನಿಮಾ 1965, 1980 ಹಾಗೂ 1999ರ ಕಾಲಘಟ್ಟದಲ್ಲಿ ನಡೆಯುವ ಕಥೆ ಮಾದೇವನದ್ದು. ಆರ್.ಕೇಶವ(ದೇವಸಂದ್ರ) ನಿರ್ಮಾಣದ ಚಿತ್ರಕ್ಕೆ ಸುಮಂತ್ ಎಂಬುವವರು ಸಹ ನಿರ್ಮಾಪಕರು. ವಿನೋದ್ ಪ್ರಭಾಕರ್-ಸೋನಲ್ ಮಂಥೆರೋ ಜೊತೆಗೆ ಶೃತಿ ಮತ್ತು ಅಚ್ಯುತ್ ಕುಮಾರ್ ಕೂಡಾ ಪ್ರಧಾನ ಪಾತ್ರದಲ್ಲಿರೋ ಮಾದೇವ ಚಿತ್ರಕ್ಕೆ ವಿಲನ್ ಆಗಿ ಬರುತ್ತಿರೋ ಶ್ರೀನಗರ ಕಿಟ್ಟಿ ಲುಕ್ ಮಾತ್ರ ಭಯಂಕರವಾಗಿದೆ.