ನಾಳೆ ಉಪ್ಪಿ ಹಬ್ಬ. ಅದಕ್ಕೆ ಮುನ್ನ ಹಬ್ಬಕ್ಕೆ ಉಡುಗೊರೆಯಾಗಿ ಬರುತ್ತಿರುವುದು ಕಬ್ಜ ಟೀಸರ್. ಟೀಸರ್ ಬಿಡುಗಡೆಯನ್ನೇ ಹಬ್ಬದಂತೆ ಮಾಡುತ್ತಿದ್ದಾರೆ ಆರ್.ಚಂದ್ರು. ಕಬ್ಜ ಚಿತ್ರಕ್ಕೆ ನಿರ್ದೇಶಕರೂ ಅವರೇ. ನಿರ್ಮಾಪಕರೂ ಅವರೇ. ಉಪೇಂದ್ರ-ಸುದೀಪ್ ಕಾಂಬಿನೇಷನ್ ಸಿನಿಮಾ ಎಂದ ಮೇಲೆ ಚಿತ್ರದ ಪ್ರತಿಯೊಂದು ಸುದ್ದಿಯೂ ಹಬ್ಬವೇ ಸೈ.
ಕಬ್ಬ ಚಿತ್ರದ ಟೀಸರ್ ಬಿಡುಗಡೆ ಸಮಾರಂಭ ದೊಡ್ಡ ಮಟ್ಟದಲ್ಲಿ ನಡೆಯುತ್ತಿದೆ. ಶಿವರಾಜಕುಮಾರ್ ಮತ್ತು ರಾಣಾ ದಗ್ಗುಬಾಟಿ ಮುಖ್ಯ ಅತಿಥಿಗಳು. ಕಬ್ಬ 7 ಭಾಷೆಗಳಲ್ಲಿ ರಿಲೀಸ್ ಆಗಲಿದೆ. ಬೆಂಗಳೂರಿನ ಒರಾಯನ್ ಮಾಲ್‍ನಲ್ಲಿ ನಡೆಯಲಿರೋ ಕಾರ್ಯಕ್ರಮಕ್ಕೆ ಎಲ್ಲ ಭಾಷೆಗಳ ಪತ್ರಕರ್ತರೂ ಬರಲಿದ್ದಾರೆ.
ಉಪೇಂದ್ರ, ಕಿಚ್ಚ ಸುದೀಪ್, ಶ್ರೀಯಾ ಸರಣ್ ಪ್ರಮುಖ ಪಾತ್ರದಲ್ಲಿರೋ ಚಿತ್ರಕ್ಕೆ ರವಿ ಬಸ್ರೂರು ಸಂಗೀತ ನೀಡಿದ್ದಾರೆ.