ಬನಾರಸ್ ಚಿತ್ರದ ಮೂಲಕ ಕನ್ನಡಿಗರಿಗೆ ತಲುಪಿದ ಮೊದಲ ಹಾಡು ಮಾಯಗಂಗೆ. ಆ ಹಾಡಿನ ಮೂಲಕ ಬೇರೆಯದೇ ಮಜಲು ತೋರಿಸಿದ್ದ ಬನಾರಸ್ ಸಿನಿಮಾ ಈಗ ಎರಡನೇ ಹಾಡಿನ ಲಿರಿಕಲ್ ವಿಡಿಯೋವನ್ನು ರಿಲೀಸ್ ಮಾಡಿದೆ. ಟ್ರೋಲ್ ಸಾಂಗ್‍ನಲ್ಲಿ ನಮ್ಮ ತಪ್ಪು ನಮಗೆ ಕಾಣಲ್ಲ ಎನ್ನುವ ಅರ್ಥದಲ್ಲಿ ಏನೇ ಮಾಡಿದರೂ ಟ್ರೋಲ್ ಗ್ಯಾರಂಟಿ ಅನ್ನೋ ಟಪ್ಪಾಂಗುಚ್ಚಿ ಸ್ಟೈಲ್ ಹಾಡಿದೆ.
ಈ ಹಾಡಿನ ವಿಶೇಷತೆಯೆಂದರೆ ಹಾಡನ್ನು ಬರೆದಿರೋದು ಡಾ.ವಿ.ನಾಗೇಂದ್ರ ಪ್ರಸಾದ್. ಎಲ್ಲ ಟ್ರೋಲು.. ಎಲ್ಲ ಟ್ರೋಲು. ಸಿಕ್ಕಾಪಟ್ಟೆ ಕೊಲೆಸ್ಟ್ರಾಲು.. ಹಾಡನ್ನು ಯುಗಳಗೀತೆಗಳ ಮಾಧುರ್ಯ ಭರಿತ ಹಾಡುಗಳ ಕವಿ ಎಂದೇ ಹೆಸರಾಗಿರೋ ನಾಗೇಂದ್ರ ಪ್ರಸಾದ್ ಬರೆದಿದ್ದರೆ, ಅಜನೀಶ್ ಲೋಕನಾಥ್ ಅವರೇ ಸಂಗೀತ ನೀಡಿ ಹಾಡನ್ನೂ ಹಾಡಿದ್ದಾರೆ.
ಜಯತೀರ್ಥ ನಿರ್ದೇಶನದ ಚಿತ್ರದಲ್ಲಿ ಜಮೀರ್ ಅಹ್ಮದ್ ಪುತ್ರ ಝೈದ್ ಖಾನ್ ಹೀರೋ ಆಗಿದ್ದರೆ, ಸೋನಲ್ ಮಂಥೆರೋ ನಾಯಕಿ. ದೇವರಾಜ್, ಸುಜಯ್ ಶಾಸ್ತ್ರಿ, ಅಚ್ಯುತ್ ಕುಮಾರ್.. ಮೊದಲಾದವರು ನಟಿಸಿರೋ ಸಿನಿಮಾ ಬನಾರಸ್. ರಾಜ್ಯೋತ್ಸವದ ಸಂದರ್ಭದಲ್ಲಿ ನವೆಂಬರ್ 4ಕ್ಕೆ ಬಿಡುಗಡೆಯಾಗಲಿರೋ ಚಿತ್ರಕ್ಕೆ ತಿಲಕ್ ರಾಜ್ ಬಲ್ಲಾಳ್ ನಿರ್ಮಾಪಕ. ಮುಝುಮಿಲ್ ಅಹ್ಮದ್ ಖಾನ್ ಸಹ ನಿರ್ಮಾಪಕ.