ಮಾರ್ಚ್ 17. ಪುನೀತ್ ರಾಜಕುಮಾರ್ ಹುಟ್ಟಿದ ದಿನ. ಆ ದಿನವನ್ನು ಸ್ಫೂರ್ತಿಯ ದಿನ ಅಥವಾ ಪ್ರೇರಣಾ ದಿನವನ್ನಾಗಿ ಘೋಷಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ. ಕೇವಲ ಸಿನಿಮಾದಲ್ಲಷ್ಟೇ ಅಲ್ಲದೆ ವ್ಯಕ್ತಿತ್ವ ಮತ್ತು ಸಾಮಾಜಿಕ ಸೇವಾ ಕಾರ್ಯಗಳಿಂದ ಪುನೀತ್ ಮಾಡಿದ್ದ ಕೆಲಸಗಳು ಎಲ್ಲರಿಗೂ ಪ್ರೇರಣೆಯಾಗಲಿ ಎಂದು ರಾಜ್ಯ ಸರ್ಕಾರ ಘೋಷಿಸಿದೆ.
ಪುನೀತ್ ಅವರಿಗೆ ರಾಜ್ಯ ಸರ್ಕಾರ ಕರ್ನಾಟಕ ರತ್ನ ಪುರಸ್ಕಾರ ಘೋಷಿಸಿದ್ದ, ನವೆಂಬರ್ 1ರಂದು ರಾಜ್ಯೋತ್ಸವ ದಿನದಂದು ಪ್ರದಾನ ಮಾಡಲಿದೆ. ಈಗ ಸ್ಫೂರ್ತಿಯ ದಿನವಾಗಿ ಅವರ ಹುಟ್ಟುಹಬ್ಬವನ್ನು ಘೋಷಣೆ ಮಾಡಲಾಗುತ್ತಿದೆ.
ಅಂದಹಾಗೆ ಪುನೀತ್ ಈಗಾಗಲೇ ಹಲವರಿಗೆ ಹಲವು ರೀತಿಯಲ್ಲಿ ಸ್ಫೂರ್ತಿಯಾಗಿದ್ದಾರೆ. ನೇತ್ರದಾನಕ್ಕೆ ಪುನೀತ್ ಪ್ರೇರಣೆಯಾಗಿರುವುದು ಇತಿಹಾಸವನ್ನೇ ಸೃಷ್ಟಿಸಿದೆ. 2 ಲಕ್ಷಕ್ಕೂ ಹೆಚ್ಚು ಜನ ನೋಂದಣಿ ಮಾಡಿಕೋಂಡಿದ್ದಾರೆ. ದಾನ-ಧರ್ಮ, ದೀನರ ಸೇವೆಯಲ್ಲಿಯೂ ಪುನೀತ್ ಸ್ಫೂರ್ತಿಯಿಂದಾಗಿಯೇ ಹಲವರು ತೊಡಗಿಸಿಕೊಂಡಿದ್ದಾರೆ.