ಆದಿತಿ ಪ್ರಭುದೇವ..
ಮೇಘಾ ಶೆಟ್ಟಿ...
ರಚನಾ ಇಂದರ್..
ಮೂವರೂ ಮುದ್ದು ಮುದ್ದಾಗಿ ಬಂದು ಗಣೇಶ್ ಕೆನ್ನೆ ಹಿಂಡುತ್ತಾರೆ. ಗಣೇಶ್ ನಾಚಿಕೊಳ್ತಾರೆ. ಇದು ತ್ರಿಬಲ್ ರೈಡಿಂಗ್ ಚಿತ್ರದ ಯಟ್ಟಾ..ಯಟ್ಟಾ..ಯಟ್ಟಾ.. ಸಾಂಗು.
ಇದು ಮಹೇಶ್ ಗೌಡ ನಿರ್ದೇಶನದ ಸಿನಿಮಾ. ಚಿತ್ರದ ಮೊದಲ ಝಲಕ್ ತೋರಿಸಿದ್ದಾರೆ ಮಹೇಶ್. ರಾಮ್‍ಗೋಪಾಲ್ ನಿರ್ಮಾಣದ ಚಿತ್ರದ ಈ ಹಾಡಿಗೆ ಸಾಹಿತ್ಯ ಒದಗಿಸಿರೋದು ಚಂದನ್ ಶೆಟ್ಟಿ. ತಮ್ಮದೇ ಸಾಹಿತ್ಯಕ್ಕೆ ಧ್ವನಿಯೂ ಅವರದ್ದೇ. ಚಂದನ್ ಶೆಟ್ಟಿ ಜೊತೆ ಮಾದಕವಾಗಿ ಹಾಡಿರೋದು ಮಂಗ್ಲಿ. ಸಾಯಿ ಕಾರ್ತಿಕ್ ಸಂಗೀತ ನಿರ್ದೇಶನವಿದೆ.