ಸಿನಿಮಾ ಥಿಯೇಟರುಗಳಲ್ಲಿ ಇಲ್ಲ. ಆದರೆ ರಕ್ಕಮ್ಮ ಕ್ರೇಜ್ ಕಮ್ಮಿಯಾಗಿಲ್ಲ. 2022ರ ಸೂಪರ್ ಹಿಟ್ ಚಿತ್ರಗಳಲ್ಲಿ ಒಂದಾದ ವಿಕ್ರಾಂತ್ ರೋಣನ ಆರ್ಭಟ ಈಗ ಒಟಿಟಿಗಳಲ್ಲಿ ನಡೆಯುತ್ತಿದೆ. ಚಿತ್ರದ ಬಗ್ಗೆ ವಿಶೇಷ ಪ್ರೀತಿಯಿಟ್ಟುಕೊಂಡಿರೋ ಚಿತ್ರತಂಡ ಈಗ ಇನ್ನೊಂದು ಆಫರ್ ಕೊಟ್ಟಿದೆ. ನೀವು ಮಾಡಬೇಕಿರೋದು.. ಇಷ್ಟೆ.
ರಾ ರಾ ರಕ್ಕಮ್ಮ.. ಹಾಡಿನ ಸ್ಟೆಪ್ ಹಾಕಬೇಕು. ಹಾಡಿನಲ್ಲಿ ಫೇಮಸ್ ಆಗಿರುವ ಹುಕ್ ಸ್ಟೆಪ್ ಮಾಡಿದರೆ ಇನ್ನೂ ಚೆಂದ. ಆ ಹಾಡನ್ನು ವಿಡಿಯೋ ಮಾಡಿ ರೀಲ್ಸ್ ಅಪ್ಲೋಡ್ ಮಾಡಿ. ಅದು #ವಿಕ್ರಾಂತ್ರೋಣಜೀ5 ನಲ್ಲಿ ಅಪ್ಲೋಡ್ ಮಾಡಿ. ವಿಡಿಯೋ ಚೆನ್ನಾಗಿದ್ದರೆ.. ಆಯ್ದ 10 ಮಂದಿಗೆ 25 ಸಾವಿರ ಬಹುಮಾನ ಸಿಗಲಿದೆ. ಜೊತೆಗೆ ಕಿಚ್ಚನ ಅಭಿನಂದನಾ ಪತ್ರವೂ ಕೂಡಾ.