ಉಪೇಂದ್ರ ನಟಿಸುತ್ತಿರುವ ಬಹುಭಾಷಾ ಸಿನಿಮಾ ಕಬ್ಜ. ಉಪೇಂದ್ರ ಜೊತೆ ಸುದೀಪ್ ಕೂಡಾ ಪ್ರಧಾನ ಪಾತ್ರದಲ್ಲಿದ್ದಾರೆ. ಶ್ರಿಯಾ ಸರಣ್ ನಾಯಕಿಯಾಗಿರೋ ಚಿತ್ರದಲ್ಲಿ ಡ್ಯಾನಿಷ್ ಅಖ್ತರ್ ಸೈಫಿ, ನವಾಬ್ ಷಾ, ಕಬೀರ್ ಸಿಂಗ್ ದುಲ್ಹಾನ್, ಪೊಸಾನಿ ಮುರಳಿ ಕೃಷ್ಣ, ಮುರಳೀಕೃಷ್ಣ ಸೇರಿದಂತೆ ದೊಡ್ಡ ಕಲಾವಿದರ ದಂಡೇ ಇದೆ. ಈ ಚಿತ್ರದ ಟೀಸರ್ ಬಿಡುಗಡೆಗೆ ಕಾಲ ಕೂಡಿ ಬಂದಿದೆ. ಸೆಪ್ಟೆಂಬರ್ 18ರಂದು ಉಪ್ಪಿ ಹುಟ್ಟುಹಬ್ಬ. ಅದಕ್ಕೆ ಮುನ್ನ ಸೆ.17ರಂದು ಕಬ್ಜ ಟೀಸರ್ ಬಿಡುಗಡೆಯಾಗಲಿದೆ.
ಕೆಜಿಎಫ್ ಯಶಸ್ಸು ಸಿನಿಮಾ ಮೇಕರ್‍ಗಳ ಮೇಲೆ ಹೆಚ್ಚಿನ ಜವಾಬ್ದಾರಿ ಹೊರಿಸಿದೆ. ಸಿನಿಮಾದ ಬಜೆಟ್ ಮತ್ತು ಕ್ಯಾನ್ವಾಸ್ ವಿಚಾರದಲ್ಲಿ ಎಲ್ಲಿಯೂ ಕಾಂಪ್ರಮೈಸ್ ಆಗಿಲ್ಲ ಎಂದಿದ್ದಾರೆ ನಿರ್ದೇಶಕ ಆರ್.ಚಂದ್ರು. ಎಂಟಿಬಿ ನಾಗರಾಜ್ ಅರ್ಪಿಸುತ್ತಿರುವ ಚಿತ್ರಕ್ಕೆ ಆರ್.ಚಂದ್ರು ಅವರೇ ನಿರ್ಮಾಪಕ.