ಇತ್ತೀಚೆಗೆ ನಟ ಡಾರ್ಲಿಂಗ್ ಕೃಷ್ಣ ಸಂದರ್ಶನವೊಂದರಲ್ಲಿ ಮಾತನಾಡುತ್ತಾ ``ಅಪ್ಪುಗೆ ನಾ ನಿನ್ನ ಮರೆಯಲಾರೆ ಚಿತ್ರವನ್ನು ರಿಕ್ರಿಯೇಟ್ ಮಾಡಬೇಕು ಎಂಬ ನಸ್ಸಿತ್ತು. ಡಾ.ರಾಜ್ ಪಾತ್ರದಲ್ಲಿ ಅಪ್ಪು ಹಾಗೂ ಲಕ್ಷ್ಮಿ ಪಾತ್ರದಲ್ಲಿ ರಮ್ಯಾ ನಟಿಸಬೇಕಿತ್ತು'' ಎಂದಿದ್ದರು.
ನಾ ನಿನ್ನ ಮರೆಯಲಾರೆ. 1976ರಲ್ಲಿ ತೆರೆಗೆ ಬಂದಿದ್ದ ಸಿನಿಮಾ. ಟ್ರೆಂಡ್ ಸೆಟ್ಟರ್. ಕನ್ನಡದಲ್ಲಿ ಒಂದು ಪಕ್ಕಾ ಲವ್ ಸ್ಟೋರಿಗೆ ಮುನ್ನುಡಿ ಬರೆದಿದ್ದ ಸಿನಿಮಾ. ವೀರಸ್ವಾಮಿ ನಿರ್ಮಾಣ ಮಾಡಿದ್ದ ಚಿತ್ರದಲ್ಲಿ ರೊಮ್ಯಾಂಟಿಕ್ ಜೋಡಿಯಾಗಿ ರಾಜ್-ಲಕ್ಷ್ಮಿ ಮಿಂಚಿದ್ದರು. ಚಿತ್ರದ ಹಾಡುಗಳು ಇವತ್ತಿಗೂ ಚಿತ್ರರಸಿಕರ ಫೇವರಿಟ್. ಲೀಲಾವತಿ ಮಗಳ ಪ್ರೀತಿಗೇ ದ್ರೋಹ ಮಾಡುವ ಅಮ್ಮನಾಗಿ ನಟಿಸಿದ್ದರು. ಬೈಕ್ ರೇಸಿಂಗ್‍ನ್ನು ಕನ್ನಡದಲ್ಲಿ ತೆರೆಯ ಮೇಲೆ ತಂದ ಮೊದಲ ಸಿನಿಮಾ ಕೂಡಾ ನಾ ನಿನ್ನ ಮರೆಯಲಾರೆ. ಆ ಸಿನಿಮಾವನ್ನು ಮರುಸೃಷ್ಟಿ ಮಾಡುವ ಕನಸು ಕಂಡಿದ್ದರು ಅಪ್ಪು ಎಂಬ ಸುದ್ದಿ ಸಂಚಲನ ಮೂಡಿಸಿದ್ದು ಸುಳ್ಳಲ್ಲ.
ಡಾರ್ಲಿಂಗ್ ಕೃಷ್ಣ ಹೇಳಿದ್ದು ಸತ್ಯ. ಇದೇ ಪ್ರಾಜೆಕ್ಟ್ ಬಗ್ಗೆ ನಾನು ಮತ್ತು ಅಪ್ಪು ಮಾತನಾಡಿದ್ವಿ ಎಂದಿದ್ದಾರೆ ರಮ್ಯಾ.
ರಮ್ಯಾ ಈಗ ನಿರ್ಮಾಪಕಿಯಾಗಿ ಎಂಟ್ರಿ ಕೊಟ್ಟಿದ್ದಾರೆ. ಪುನೀತ್ ಇದ್ದಿದ್ದರೆ ಪುನೀತ್ ಜೊತೆಗೆ ಸಿನಿಮಾ ಮಾಡುವ ಮೂಲಕ ಚಿತ್ರರಂಗಕ್ಕೆ ರೀ-ಎಂಟ್ರಿ ಮಾಡುತ್ತಿದ್ದೆ ಎಂದಿದ್ದರು ರಮ್ಯಾ.
ಈಗ ಪುನೀತ್ ಲಕ್ಕಿಮ್ಯಾನ್ ಮೂಲಕ ಬೆಳ್ಳಿತೆರೆಯ ಮೇಲೆ ಕೊನೆಯ ಬಾರಿಗೆ ನಟಿಸಿದ್ದಾರೆ. ನವೆಂಬರ್‍ನಲ್ಲಿ ಗಂಧದಗುಡಿ ರಿಲೀಸ್ ಆದರೂ, ಅದು ಡಾಕ್ಯುಮೆಂಟರಿಯೇ ಹೊರತು ಸಿನಿಮಾ ಅಲ್ಲ.