ಬಾಲ್ಯದ ಗೆಳತಿಯನ್ನೇ ಮದುವೆಯಾಗುವ ನಾಯಕನಿಗೆ, ಅವಳ ಜೊತೆ ರೊಮ್ಯಾನ್ಸ್ ಮಾಡುವ ಪ್ರೀತಿಯೇ ಹುಟ್ಟುವುದಿಲ್ಲ. ಒಳ್ಳೆ ಫ್ರೆಂಡ್ಸ್ ಆಗಿರ್ತಾರೆ. ಈ ನಡುವೆ ಅವನ ಸೀನಿಯರ್ ಕ್ರಷ್ ಒಬ್ಬಳು ಸಿಗುತ್ತಾಳೆ. ಕ್ರಷ್ ಲವ್ವಾಗುತ್ತೆ. ಇದರ ನಡುವೆ ಅವನು ಇಷ್ಟಪಡುವ ಮನಸ್ಸುಗಳಿಗೆ ನೋವಾಗಿರುತ್ತೆ. ಆಗ ದೇವರು ಅವನಿಗೊಂದು ಚಾನ್ಸ್ ಕೊಡುತ್ತಾನೆ.
ನಿನಗೆ ಇನ್ನೊಂದು ಲೈಫ್ ಕೊಡ್ತಾ ಇದ್ದೀನಿ. ನೀನು ಪ್ರೀತಿಸುವ ಮನಸ್ಸುಗಳನ್ನೆಲ್ಲ ಮಾಡಿರುವ ತಪ್ಪುಗಳನ್ನೆಲ್ಲ ಸರಿಪಡಿಸಿಕೋ.. ಎನ್ನುತ್ತಾನೆ ದೇವರು. ನಾಯಕನಿಗೆ ಪುನಃ ಹೊಸ ಲೈಫ್ ಪ್ರಾಪ್ತಿ. ಸಿನಿಮಾದಲ್ಲಿ ದೇವರಾಗಿ ಬರುವುದು ಪುನೀತ್ ರಾಜಕುಮಾರ್.
ಲಕ್ಕಿಮ್ಯಾನ್ ನೋಡಿದ ಅಪ್ಪು ಅಭಿಮಾನಿಗಳು ಕಣ್ಣೀರಿಟ್ಟಿದ್ದೇ ಅದಕ್ಕೆ. ಪುನೀತ್ ಇನ್ನಿಲ್ಲ ಎನ್ನುವುದನ್ನು ಇವತ್ತಿಗೂ ನಂಬದ ಸಾವಿರಾರು ಅಭಿಮಾನಿಗಳಿದ್ದಾರೆ. ಅದರ ಮಧ್ಯೆ ದೇವರು ಯಾರ್ಯಾರಿಗೋ ಒಂದು ಚಾನ್ಸ್ ಕೊಡ್ತಾನೆ. ನಮ್ಮ ಅಪ್ಪುಗೆ ಒಂದು ಚಾನ್ಸ್ ಕೊಡೋಕೆ ಆಗ್ತಾ ಇರಲಿಲ್ವಾ ಎಂದು ದೇವರನ್ನು ಬೈದುಕೊಳ್ಳೋ ಅಭಿಮಾನಿಗಳಿಗೂ ಲೆಕ್ಕವಿಲ್ಲ. ಅಂತಾದ್ರಲ್ಲಿ ಲಕ್ಕಿಮ್ಯಾನ್ ಚಿತ್ರದಲ್ಲಿ ಸ್ವತಃ ದೇವರ ಪಾತ್ರದಲ್ಲಿ ನಟಿಸಿರುವ ಪುನೀತ್ ಇನ್ನೊಂದು ಚಾನ್ಸ್ ಕೊಡ್ತೇನೆ ಎನ್ನುವಾಗ ಪುನೀತ್ ಅಭಿಮಾನಿಗಳು ಕಣ್ಣೀರಿಟ್ಟಿದ್ದಾರೆ.
ಡಾರ್ಲಿಂಗ್ ಕೃಷ್ಣ, ಸಂಗೀತಾ ಶೃಂಗೇರಿ, ರೋಷನಿ ಪ್ರಕಾಶ್, ನಾಗಭೂಷಣ್, ಸಾಧುಕೋಕಿಲ ಅಭಿನಯದ ಲಕ್ಕಿಮ್ಯಾನ್ ಚಿತ್ರ ಓ ಮೈ ಕಡವುಳೆ ಚಿತ್ರದ ರೀಮೇಕ್. ನಾಗೇಂದ್ರ ಪ್ರಸಾದ್ ನಿರ್ದೇಶಕ.