` ನಿಜವಾದ ಲಕ್ಕಿಮ್ಯಾನ್ ನಾನೇ : ಡಾರ್ಲಿಂಗ್ ಕೃಷ್ಣ - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
ನಿಜವಾದ ಲಕ್ಕಿಮ್ಯಾನ್ ನಾನೇ : ಡಾರ್ಲಿಂಗ್ ಕೃಷ್ಣ
ನಿಜವಾದ ಲಕ್ಕಿಮ್ಯಾನ್ ನಾನೇ : ಡಾರ್ಲಿಂಗ್ ಕೃಷ್ಣ

ನಾಳೆ ಲಕ್ಕಿಮ್ಯಾನ್ ಚಿತ್ರ ಬಿಡುಗಡೆ. ಚಿತ್ರದ ಹೀರೋ ಡಾರ್ಲಿಂಗ್ ಕೃಷ್ಣ. ಅವರೇ ಲಕ್ಕಿಮ್ಯಾನ್. ಸಂಗೀತಾ ಶೃಂಗೇರಿ ಮತ್ತು ರೋಷನಿ ಪ್ರಕಾಶ್ ನಾಯಕಿಯಾಗಿರೋ ಚಿತ್ರಕ್ಕೆ ನಾಗೇಂದ್ರ ಪ್ರಸಾದ್ ನಿರ್ದೇಶಕ. ಅಪ್ಪು ಅಭಿನಯದ ಕೊನೆಯ ಚಿತ್ರದಲ್ಲಿ ಪ್ರಭುದೇವ ಕೂಡಾ ನಟಿಸಿದ್ದಾರೆ.

ಈ ಚಿತ್ರದ ಆಫರ್ ಬಂದಾಗ ನಾನು ನಾನ್ ಕಡವುಳೆ ಚಿತ್ರ ನೋಡಿದೆ. ವಿಜಯ್ ಸೇತುಪತಿ ಪಾತ್ರ ಇಷ್ಟವಾಗಿತ್ತು.

ಚಿತ್ರ ನೋಡಿದ್ದೆ. ನಾಗೇಂದ್ರ ಪ್ರಸಾದ್ 2 ತಿಂಗಳ ನಂತರ ಅಗ್ರಿಮೆಂಟ್‍ಗೆ ಸೈನ್ ಹಾಕೋಕೆ ಫೋನ್ ಮಾಡಿದರು. ಆದರೆ ಮಿಲನಾ ಒಪ್ಪಿರಲಿಲ್ಲ. ಈಗ ಕೆರಿಯರ್ ಬೆಳೆಯುತ್ತಿರೋ ಸಮಯದಲ್ಲಿ ರೀಮೇಕ್ ಬೇಕಾ ಎಂದು ಪ್ರಶ್ನೆಯೆತ್ತಿದರು. ಮಿಲನಾ ಅವರನ್ನು ಒಪ್ಪಿಸಿ ನಟಿಸೋಕೆ ರೆಡಿಯಾದೆ. ಆಮೇಲೆ ಪುನೀತ್ ಸರ್ ಜೊತೆಯಾದರು. ಲಕ್ಕಿಮ್ಯಾನ್ ಅಲ್ಲವೇ ಎನ್ನುವ ಡಾರ್ಲಿಂಗ್ ಕೃಷ್ಣಕ್ಕೆ ಪುನೀತ್ ಜೊತೆ ನಟಿಸುವುದು ಹೊಸದೇನಲ್ಲ.

ನನಗೆ ಪುನೀತ್ ಅವರ ಜೊತೆ ನಟಿಸುವುದು ಹೊಸದಲ್ಲ. ನನಗೆ ಅವರು 10 ವರ್ಷಗಳಿಂದ ಗೊತ್ತು. ನನ್ನ ಕೆರಿಯರ್‍ನಲ್ಲಿ ಅವರ ಪಾತ್ರವೂ ಇದೆ. ಅಷ್ಟೇ ಅಲ್ಲ, ಜಾಕಿ ಚಿತ್ರದಲ್ಲಿ ಅಸಿಸ್ಟೆಂಟ್ ಡೈರೆಕ್ಟರ್ ಆಗಿದ್ದಾಗ ಅವರಿಗೆ ನಿರ್ದೇಶನ ಮಾಡಿದ ಅನುಭವವೂ ಇದೆ. ಆದರೂ ಹೀರೋ ಆಗಿರುವ ಚಿತ್ರದಲ್ಲಿ ಅಪ್ಪು ಸರ್ ನಟಿಸುತ್ತಾರೆ ಎಂದಾಗ ನರ್ವಸ್ ಆಗಿದ್ದಂತೂ ನಿಜ. ಆದರೆ ಅವರೇ ಆ ಆತಂಕ ದೂರ ಮಾಡಿದರು ಎನ್ನುವ ಕೃಷ್ಣಗೆ ಅಪ್ಪು ಅವರ ಕೊನೆಯ ಚಿತ್ರಕ್ಕೆ ನಾನು ಹೀರೋ ಎನ್ನುವ ಪ್ರೀತಿ, ಅಭಿಮಾನ ಇದೆ. ಹೀಗಾಗಿಯೇ ನಾನು ನಿಜವಾದ ಲಕ್ಕಿಮ್ಯಾನ್ ಎನ್ನುತ್ತಾರೆ.

ಚಿತ್ರದಲ್ಲಿ ಪುನೀತ್ ಜೊತೆ ಪ್ರಭುದೇವ ಕೂಡಾ ಇದ್ದಾರೆ. ಇಬ್ಬರು ನಾಯಕಿಯರಿದ್ದಾರೆ. ರಿಯಲ್ ಲೈಫಲ್ಲಿ ಮತ್ತು ರೀಲ್ ಲೈಫಲ್ಲಿ ಎರಡರಲ್ಲೂ ನಾನು ಲಕ್ಕಿಮ್ಯಾನ್ ಎನ್ನುವ ಕೃಷ್ಣ, ನಾಳೆಯ ರಿಲೀಸ್‍ಗೆ ಕಾಯುತ್ತಿದ್ದಾರೆ.