ಜೋಗಿ ಪ್ರೇಮ್ ಮತ್ತು ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಒಟ್ಟಾಗಿ ಸೇರಿದಾಗಲೇ ಸೆನ್ಸೇಷನ್ ಶುರುವಾಗಿತ್ತು. ಈಗ ಈ ಚಿತ್ರದಿಂದ ಇನ್ನೊಂದು ಸಂಚಲನಾತ್ಮಕ ಸುದ್ದಿ ಹೊರಬಿದ್ದಿದೆ. ಅಧೀರನಾಗಿ ಕನ್ನಡ ಚಿತ್ರರಂಗ ಪ್ರವೇಶಿಸಿದ್ದ ಸಂಜಯ್ ದತ್, ಈ ಚಿತ್ರದಲ್ಲೂ ಖಳನಾಗಿ ಮಿಂಚಲಿದ್ದಾರೆ ಎಂಬ ಸುದ್ದಿ ಹೊರಬಿದ್ದಿದೆ.
ಕೆವಿಎನ್ ಪ್ರೊಡಕ್ಷನ್ಸ್ ಸಂಸ್ಥೆಯ ಈ ಚಿತ್ರಕ್ಕೆ ಇನ್ನೂ ಟೈಟಲ್ ಫಿಕ್ಸ್ ಆಗಿಲ್ಲ. ಇದರ ನಡುವೆಯೇ ಪ್ರೇಮ್ ಮತ್ತು ಸಂಜಯ್ ದತ್ ಮಧ್ಯೆ ಮಾತುಕತೆ ಮುಗಿದಿದೆ ಎನ್ನಲಾಗಿದ್ದು, ಸಂಜಯ್ ದತ್ ಓಕೆ ಎಂದಿದ್ದಾರೆ ಎಂಬ ಸುದ್ದಿಗಳಿವೆ.