ಡಾಲಿ ಧನಂಜಯ್ ನಿರಂತರವಾಗಿ ಸದ್ದು ಸುದ್ದಿ ಮಾಡುತ್ತಿದ್ದಾರೆ. ಇದೇ ಸೆಪ್ಟೆಂಬರ್‍ನಲ್ಲಿ ಡಾಲಿ ಧನಂಜಯ್ ಅವರ ಎರಡು ಸಿನಿಮಾಗಳು ರಿಲೀಸ್ ಆಗುತ್ತಿದೆ. ಮಾನ್ಸೂನ್ ರಾಗ ಮತ್ತು ತೋತಾಪುರಿ. ತೋತಾಪುರಿಯಲ್ಲಿ ಅವರದ್ದು ಅತಿಥಿ ನಟನ ಪಾತ್ರ. ಬೆನ್ನಲ್ಲೇ ಹೆಡ್ ಬುಷ್, ಒನ್ಸ್ ಅಪಾನ್ ಎ ಟೈಂ ಇನ್ ಜಮಾಲಿಗುಡ್ಡ ಚಿತ್ರಗಳಿವೆ. ಇದು ಈ ವರ್ಷದ ಕಥೆಯಾಯಿತು. ಮುಂದಿನ ವರ್ಷಕ್ಕೂ ರಿಲೀಸ್ ಡೇಟ್ ಪಕ್ಕಾ ಮಾಡಿದ್ದಾರೆ ಡಾಲಿ.
ಕಾರ್ತಿಕ್ ಗೌಡ, ಯೋಗಿ ಬಿ.ರಾಜ್ ಮತ್ತು ಡಾಲಿ ಧನಂಜಯ್ ಅವರ ಕಾಂಬಿನೇಷನ್ ಸಿನಿಮಾ ಹೊಯ್ಸಳ. ವಿಜಯ್ ಎನ್. ನಿರ್ದೇಶಿಸುತ್ತಿರುವ ಚಿತ್ರದಲ್ಲಿ ಬೆಳಗಾವಿ ಭಾಗದ ಪೊಲೀಸ್ ಅಧಿಕಾರಿಯ ರಿಯಲ್ ಕಥೆಯನ್ನು ಚಿತ್ರವನ್ನಾಗಿಸಲಾಗಿದೆ. ಡಾಲಿ ಪಾತ್ರದ ಹೆಸರು ಗುರುದೇವ ಹೊಯ್ಸಳ. ಡಾಲಿಗೆ ಅಮೃತಾ ಅಯ್ಯಂಗಾರ್ ನಾಯಕಿ. ಚಿತ್ರದ ಬಿಡುಗಡೆಯೀಗ ಮಾರ್ಚ್ 30ಕ್ಕೆ ಫಿಕ್ಸ್ ಆಗಿದೆ. ಮುಂದಿನ ವರ್ಷಕ್ಕೆ..