ಲಕ್ಕಿಮ್ಯಾನ್ ಸಿನಿಮಾ ನಾಳೆ ರಿಲೀಸ್ ಆಗುತ್ತಿದೆ. ಡಾರ್ಲಿಂಗ್ ಕೃಷ್ಣ, ಸಂಗೀತಾ ಶೃಂಗೇರಿ, ರೋಶನಿ ಪ್ರಕಾಶ್ ಪ್ರಧಾನ ಪಾತ್ರದಲ್ಲಿರೋ ಈ ಚಿತ್ರದ ಅಪ್ಪು ಅಭಿನಯಿಸಿರುವ ಕೊನೆಯ ಸಿನಿಮಾ. ಪುನೀತ್ ರಾಜಕುಮಾರ್ ಅವರ ಜೊತೆಗೆ ಪ್ರಭುದೇವ ಒಟ್ಟಿಗೇ ನಟಿಸಿರುವ ಸಿನಿಮಾ. ಅಂದಹಾಗೆ ಇಡೀ ಸಿನಿಮಾ ಅವಧಿ 151 ನಿಮಿಷ. ಇದರಲ್ಲಿ 40ಕ್ಕೂ ಹೆಚ್ಚು ನಿಮಿಷ ಅವಧಿ ಪುನೀತ್ ತೆರೆ ಮೇಲಿರುತ್ತಾರೆ.
ಪುನೀತ್ ರಿಯಲ್ ಲೈಫಲ್ಲಿ ಹೇಗಿದ್ದರೋ.. ತೆರೆಯ ಮೇಲೂ ಹಾಗೆಯೇ ಇರುತ್ತಾರೆ. ದೇವರಾಗಿ.. ದೇವರಂತೆ ಎನ್ನುತ್ತಾರೆ ಡಾರ್ಲಿಂಗ್ ಕೃಷ್ಣ. ದಯೆ, ಕೇರಿಂಗ್, ನಿಷ್ಕಲ್ಮಷ ಪ್ರೀತಿ ಎಲ್ಲಕ್ಕಿಂತ ಹೆಚ್ಚಾಗಿ ನಗು.. ಮಾಸದ ಆ ನಗು ಇಡೀ ಚಿತ್ರದ ತುಂಬಾ ಇರುತ್ತದೆ. ಅವರನ್ನು ಆ ಪಾತ್ರದಲ್ಲಿ ನೋಡುತ್ತಿದ್ದರೆ ಅವರು ಅಭಿನಯಿಸುತ್ತಾರೆ ಎಂದೆನಿಸುವುದಿಲ್ಲ ಎನ್ನುತ್ತಾರೆ ನಾಯಕ ಡಾರ್ಲಿಂಗ್ ಕೃಷ್ಣ.
ನಾಗೇಂದ್ರ ಪ್ರಸಾದ್ ನಿರ್ದೆಶನದ ಈ ಚಿತ್ರದ ಹೀರೋ ಡಾರ್ಲಿಂಗ್ ಕೃಷ್ಣ. ಅಪ್ಪು ಸರ್ ಜೊತೆ ಈ ಹಿಂದೆಯೂ ನಟಿಸಿದ್ದೇನೆ. ಆದರೆ ನಾನು ಹೀರೋ ಆಗಿರೋ ಚಿತ್ರದಲ್ಲಿ ಅಪ್ಪು ಸರ್ ಅತಿಥಿಯಾಗಿ ನಟಿಸುವುದು ನನ್ನ ಅದೃಷ್ಟ. ಈ ಚಿತ್ರದಲ್ಲಿ ಅವರದ್ದು ದೇವರ ಪಾತ್ರ. ಅವರು ನಟಿಸಿಲ್ಲ. ಹೇಗಿದ್ದರೋ ಹಾಗೆಯೇ ಇದ್ದಾರೆ ಎನ್ನುವುದು ಡಾರ್ಲಿಂಗ್ ಕೃಷ್ಣ ಮಾತು.
ಸಿನಿಮಾ ಇದೇ ಸೆಪ್ಟೆಂಬರ್ 9ಕ್ಕೆ ತೆರೆ ಕಾಣಲಿದೆ.