` ಕಾಂತಾರ ಚಿತ್ರದ ರೋಮಾಂಚನ - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
ಕಾಂತಾರ ಚಿತ್ರದ ರೋಮಾಂಚನ
Kantara Movie Image

ಕಾಂತಾರ. ಪ್ರಕೃತಿ ಮನುಷ್ಯರ ನಡುವಿನ ಹೋರಾಟದ ಕಥೆಯಲ್ಲಿ ಶಿವ ಮತ್ತು ಮುರಳೀಧರರ ಹೋರಾಟದ ಕಥೆ ಇದೆ. ಕಾಡು..ಕರಾವಳಿ..ಪರಶುರಾಮನ ಸೃಷ್ಟಿಸಿದ ಅರಣ್ಯ..ಕಂಬಳ.. ಹೀಗೆ ಕರಾವಳಿಯ ಸೊಗಡಿನ ಕಥೆ ನಿಗೂಢಗಳನ್ನೇ ಹೊತ್ತುಕೊಂಡು ನಿಂತಿದೆ.

ಹೊಂಬಾಳೆ ಬ್ಯಾನರ್‍ನಲ್ಲಿ ರಕ್ಷಿತ್ ಶೆಟ್ಟಿಗೆ ಮೊದಲ ಸಿನಿಮಾ. ತಮ್ಮ ನಿರ್ದೇಶನದ ಚಿತ್ರದಲ್ಲಿ ತಾವೇ ನಾಯಕರಾಗಿರುವುದೂ ರಿಷಬ್ ಶೆಟ್ಟಿಗೆ ಹೊಸ ಅನುಭವ. ಸಪ್ತಮಿ ಗೌಡ ನಾಯಕಿಯಾಗಿರೋ ಚಿತ್ರದಲ್ಲೊಂದು ಪ್ರೇಮಕಥೆಯೂ ಇದೆ. ಪಾಪ್‍ಕಾರ್ನ್ ಮಂಕಿಟೈಗರ್ ಚಿತ್ರದ ನಂತರ ಪಕ್ಕಾ ಕಾಡು ಹುಡುಗಿಯ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ ಸಪ್ತಮಿಗೌಡ.

ಇದು ಹೊಸ ಪ್ರಪಂಚ. ಕಂಬಳ, ಆ್ಯಕ್ಷನ್, ಲವ್ ಸ್ಟೋರಿ, ಕಾಡು, ಸಂಚು.. ಎಲ್ಲವೂ ಇರೋ ಕಾಂತಾರಾದಲ್ಲಿ ಅಡ್ವೆಂಚರಸ್ ಕಥೆಯಿದೆ. ಅಚ್ಯುತ್ ಕುಮಾರ್, ಪ್ರಮೋದ್ ಶೆಟ್ಟಿ, ದೀಪಕ್ ರೈ ಮೊದಲಾದವರ ನಟಿಸಿರೋ ಸಿನಿಮಾದಲ್ಲಿ ಕಂಬಳ ಓಡಿಸುವವನಾಗಿ ರಿಷಬ್ ಶೆಟ್ಟಿ ಗಮನ ಸೆಳೆಯುತ್ತಾರೆ. ಆದರೆ ಅವರ ಪಾತ್ರ ಕಂಬಳ ಓಡಿಸೋದಷ್ಟೇ ಅಲ್ಲ ಅನ್ನೋದು ಟ್ರೇಲರ್ ನೋಡಿದಾಗ ಗೊತ್ತಾಗುತ್ತೆ.