` ಲಕ್ಕಿ ಮ್ಯಾನ್ : ಅಪ್ಪು ದೇವರು ಅಭಿಮಾನಿಗಳ ಸಾಗರ - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
ಲಕ್ಕಿ ಮ್ಯಾನ್ : ಅಪ್ಪು ದೇವರು ಅಭಿಮಾನಿಗಳ ಸಾಗರ
Lucky man Movie Image

ಲಕ್ಕಿಮ್ಯಾನ್ ಚಿತ್ರ ಇದೇ ವಾರ ರಿಲೀಸ್. ಅಪ್ಪು ಕಡೆಯ ಬಾರಿಗೆ ನಟಿಸಿರುವ ಚಿತ್ರವಿದು. ಸಿನಿಮಾದಲ್ಲಿ ಅಪ್ಪುರನ್ನು ನೋಡೋಕೆ ಸಾಧ್ಯವಾಗೋದು ಇದು ಕಡೆಯ ಬಾರಿ. ಜೊತೆಗೆ ಈ ಚಿತ್ರದಲ್ಲಿ ಅಪ್ಪು ದೇವರಾಗಿ ನಟಿಸಿದ್ದಾರೆ. ಹೀಗಾಗಿಯೇ ಚಿತ್ರ ಬಿಡುಗಡೆಗೆ ಮುನ್ನವೇ ಅಭಿಮಾನಿಗಳು ಮುಗಿಬಿದ್ದಿದ್ದಾರೆ.

ಲಕ್ಕಿಮ್ಯಾನ್ ಚಿತ್ರದಲ್ಲಿ ಹೀರೋ ಡಾರ್ಲಿಂಗ್ ಕೃಷ್ಣ. 777 ಚಾರ್ಲಿ ಖ್ಯಾತಿಯ ಸಂಗಿತಾ ಶೃಂಗೇರಿ ನಾಯಕಿ. ಪ್ರಭುದೇವ ಹಾಗೂ ಅಪ್ಪು ಅವರ ನೃತ್ಯ ಚಿತ್ರದ ಹೈಲೈಟ್. ನೆಕ್ಸ್ಟ್ ಬರೋದು ಗಂಧದಗುಡಿ. ಸಾಕ್ಷ್ಯಚಿತ್ರ. ಅಪ್ಪು ಅವರನ್ನು ಸಿನಿಮಾದಲ್ಲಿ ನೋಡೋಕೆ ಇದು ಕಡೆಯ ಅವಕಾಶ ಎಂಬ ಕಾರಣಕ್ಕೆ ಆನ್‍ಲೈನ್‍ಲ್ಲಿ ಬುಕ್ಕಿಂಗ್ ಜೋರಾಗಿದೆ.

ಪಿ.ಆರ್.ಮೀನಾಕ್ಷಿ ಸುಂದರಂ ಹಾಗೂ ಆರ್.ಸುಂದರ ಕಾಮರಾಜ್ ನಿರ್ಮಾಣದ ಚಿತ್ರಕ್ಕೆ ಪ್ರಭುದೇವ ಸಹೋದರ ನಾಗೇಂದ್ರ ಪ್ರಸಾದ್ ನಿರ್ದೇಶನವಿದೆ. ನಿರ್ಮಾಪಕ ಜಾಕ್ ಮಂಜು ಚಿತ್ರವನ್ನು ವಿತರಣೆ ಮಾಡುತ್ತಿದ್ದು, ಥಿಯೇಟರುಗಳಲ್ಲಿ ಆಗಲೇ ಕಟೌಟುಗಳ ಭರಾಟೆ ಜೋರಾಗಿದೆ. ರಾಯರ ದಿನವಾದ ಗುರುವಾರವೇ ಸಿನಿಮಾ ರಿಲೀಸ್ ಆಗುತ್ತಿದ್ದು ರಾಯರ ಕೃಪಾಶೀರ್ವಾದವೂ ಚಿತ್ರದ ಮೇಲಿದೆ ಎನ್ನುವುದು ಭಕ್ತರ ನಂಬಿಕೆ.