ಅವನು ಸೋಮಾರಿ. ಕೆಲಸಕ್ಕೆ ಬಾರದವನು. ಅವನಿಗೆ ಒಂದು ಊರಿನ ಪಿಟಿ ಮೇಷ್ಟ್ರು ಕೆಲಸ ಸಿಗುತ್ತೆ. ಬೈದುಕೊಂಡೇ ಊರಿಗೆ ಹೋದವನಿಗೆ ಚೆಲುವಾಂತ ಚೆಲುವೆಯೂ ಸಿಗ್ತಾಳೆ. ಹಳ್ಳಿಮೇಷ್ಟ್ರು ಅಂತಾ ನಂಬ್ತಾಳೆ. ಜೊತೆಗೆ ಉಢಾಳ್ ಹುಡುಗ್ರು. ಊರಿಗೊಬ್ಬ ವಂಚಕ. ಮೋಸಗಾರನಾಗೋಕೆ ಹೊರಡುವ ಮೇಷ್ಟ್ರು ಆಮೇಲೆ ಛಲಗಾರನಾಗುತ್ತಾನೆ. ನಡುವೆ ಮೈ ನವಿರೇಳಿಸುವ ಖೋಖೋ ಆಟ..
ಒಂದು ಸಿನಿಮಾಗೆ ಏನೇನೆಲ್ಲ ಇರಬೇಕೋ.. ಅವೆಲ್ಲವೂ ಇದೆ. ಶರಣ್ ತಾನು ಕಾಮಿಡಿಗಷ್ಟೆ ಅಲ್ಲ, ಅಳಿಸೋಕೂ ಗೊತ್ತು ಎನ್ನುವುದನ್ನು ಪ್ರೂವ್ ಮಾಡಿದ್ದಾರೆ. ಈ ಚಿತ್ರದಲ್ಲಿ ಎಮೋಷನ್ಸ್ ಜಾಸ್ತಿ ಇವೆ. ನಿಶ್ವಿಕಾ ನಾಯ್ಡು ಪಕ್ಕಾ ಹಳ್ಳಿ ಹುಡುಗಿಯಾಗಿ ಕಂಗೊಳಿಸುತ್ತಾರೆ. ಆಣೆ ಮಾಡಿ ಹೇಳುತೀನಿ ನಾನು ನಿನ್ನವಳು.. ಹಾಗೂ ಪಾಠ ಮಾಡುವ ಮೇಷ್ಟ್ರುನ್ನು ಭಗವಂತನಿಗೆ ಹೋಲಿಸಿ ಬರೆದಿದ್ದ ಗೀತೆಗಳ ಮೂಲಕವೇ ಹವಾ ಸೃಷ್ಟಿಮಾಡಿದ್ದ ಸಿನಿಮಾ, ಟ್ರೇಲರ್ ಮೂಲಕ ಹೊಸತನದ ಕಥೆ ಅನ್ನೋದನ್ನ ಸಾಬೀತು ಮಾಡಿದೆ.
ಜಡೇಶ್ ಕುಮಾರ್ ನಿರ್ದೇಶನದ ಚಿತ್ರದ ಇನ್ನೊಂದು ಹೈಲೈಟ್ 12 ಹುಡುಗರು. ಆ 12ರಲ್ಲಿ 6 ಜನ ಸ್ಟಾರ್ ಕಲಾವಿದರ ಮಕ್ಕಳು. ನೆನಪಿರಲಿ ಪ್ರೇಮ್, ನವೀನ್ ಕೃಷ್ಣ, ಬುಲೆಟ್ ಪ್ರಕಾಶ್, ರವಿಶಂಕರ್, ಶಾಸಕ ರಾಜೂಗೌಡ ಮಕ್ಕಳು. ಹವಾ ಜೋರಾಗಿದೆ.