` ಮೇಘನಾ ರಾಜ್ ಕಂಬ್ಯಾಕ್ ಚಿತ್ರಕ್ಕೆ ಪ್ರಜ್ವಲ್ ಎಂಟ್ರಿ - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
ಮೇಘನಾ ರಾಜ್ ಕಂಬ್ಯಾಕ್ ಚಿತ್ರಕ್ಕೆ ಪ್ರಜ್ವಲ್ ಎಂಟ್ರಿ
ಮೇಘನಾ ರಾಜ್ ಕಂಬ್ಯಾಕ್ ಚಿತ್ರಕ್ಕೆ ಪ್ರಜ್ವಲ್ ಎಂಟ್ರಿ

ಗೆಳೆಯರೆಲ್ಲ ಒಟ್ಟಾಗಿ ಸೇರಿದ್ದಾರೆ. ನಿರ್ದೇಶಕ ಪನ್ನಗಾಭರಣ ನಿರ್ಮಾಣವನ್ನೂ ಮಾಡುತ್ತಿರೋ ಹೊಸ ಚಿತ್ರಕ್ಕೆ ಮೇಘನಾ ರಾಜ್ ನಾಯಕಿ. ಪ್ರಜ್ವಲ್ ದೇವರಾಜ್ ಗೆಸ್ಟ್ ರೋಲ್ ಮಾಡುತ್ತಿದ್ದಾರೆ.

ಈ ಚಿತ್ರಕ್ಕೆ ವಿಶಾಲ್ ನಿರ್ದೇಶಕ.

ಮೇಘನಾ ಮದುವೆಯ ನಂತರ ಒಪ್ಪಿಕೊಂಡಿರೋ ಚಿತ್ರ ಬುದ್ದಿವಂತ 2 ಮತ್ತು ಪನ್ನಗಾಭರಣ ನಿರ್ಮಾಣದ ಈ ಸಿನಿಮಾ. ರಿಲೀಸ್ ಆದ ಕಡೆಯ ಸಿನಿಮಾ ಸೆಲ್ಫಿ ಮಮ್ಮಿ ಗೂಗಲ್ ಡ್ಯಾಡಿ. ಈ ಚಿತ್ರಕ್ಕೆ ವಾಸುಕಿ ವೈಭವ್ ಸಂಗೀತ ನೀಡುತ್ತಿದ್ದಾರೆ.

ಮೇಘನಾ ರಾಜ್, ಪ್ರಜ್ವಲ್ ದೇವರಾಜ್, ಪನ್ನಗಾಭರಣ, ವಾಸುಕಿ ವೈಭವ್ ಹಾಗೂ ನಿರ್ದೇಶಕ ವಿಶಾಲ್ ಕೂಡಾ ಪರಸ್ಪರ ಸ್ನೇಹಿತರು. ಸ್ನೇಹಿತರೆಲ್ಲ ಒಂದಾಗಿ ಚಿತ್ರ ನಿರ್ಮಾಣಕ್ಕೆ ಮುಂದಾಗಿದ್ದಾರೆ.