ಫಿಲಂಫೇರ್. ಈ ಚಿತ್ರಪ್ರಶಸ್ತಿಗೊಂದು ಮಾನ್ಯತೆ ಇದೆ. ಘನತೆ ಇದೆ. ಪ್ರಖ್ಯಾತಿಯೂ ಇದೆ. ಕುಖ್ಯಾತಿಯೂ ಇದೆ. ಟೈಮ್ಸ್ ಗ್ರೂಪ್‍ನ ಈ ಪ್ರಶಸ್ತಿಯನ್ನು ಪಡೆದವರು ದಿ ಬೆಸ್ಟ್ ಎನ್ನುವ ತೀರ್ಮಾನವಿತ್ತು. ಆದರೆ ಇತ್ತೀಚೆಗೆ ಅದೂ ಹೋಗುತ್ತಿದೆ. ಹಲವು ವಿವಾದಗಳಿವೆಯಾದರೂ ಈ ಬಾರಿ ವಿವಾದವಾಗಿರುವುದು ಕಾಶ್ಮೀರ್ ಫೈಲ್ಸ್ ಚಿತ್ರದ ಬಗ್ಗೆ.
ಬಾಲಿವುಡ್‍ನಲ್ಲಿ ಕಳೆದ ವರ್ಷದ ಸೂಪರ್ ಹಿಟ್ ಚಿತ್ರಗಲ್ಲಿ ಒಂದು ಕಾಶ್ಮೀರ್ ಫೈಲ್ಸ್. ಬಾಕ್ಸಾಫೀಸ್‍ನಲ್ಲಿ ನಂ.1 ಚಿತ್ರ ಕಾಶ್ಮೀರ್ ಫೈಲ್ಸ್. ಕಾಶ್ಮೀರದ ಭಯೋತ್ಪಾದಕರ ಕಥೆಗಳನ್ನೇ ನೋಡುತ್ತಿದ್ದ ಭಾರತೀಯರಿಗೆ, ಕಾಶ್ಮೀರಿಗಳು ಭಾರತ ಬಿಟ್ಟು ಬಂದಿದ್ದೇಕೆ ಎಂಬ ಚಿತ್ರವನ್ನು ತೆಗೆದುಕೊಟ್ಟಿದ್ದು ಕಾಶ್ಮೀರ್ ಫೈಲ್ಸ್. ಭಯೋತ್ಪಾದಕರೊಳಗಿನ ಹೃದಯದೊಳಗಿನ ಪ್ರೀತಿಯನ್ನು ಹುಡುಕಾಡಿ ತೋರಿಸುತ್ತಿದ್ದವರಿಗೆ ಕಾಶ್ಮೀರಿ ಪಂಡಿತರ ಹೃದಯ ರೋದನವನ್ನೂ ತೆಗೆದಿಟ್ಟ ಚಿತ್ರ ಕಾಶ್ಮೀರ್ ಫೈಲ್ಸ್. ಎಲ್ಲಕ್ಕಿಂತ ಹೆಚ್ಚು ಕಾಶ್ಮೀರಿ ಪಂಡಿತರ ಬದುಕಿನ ಕಥೆಯನ್ನು ಅಷ್ಟೇ ವಾಸ್ತವಿಕವಾಗಿ ತೆಗೆದಿಟ್ಟ ಸಿನಿಮಾ ಕಾಶ್ಮೀರ್ ಫೈಲ್ಸ್.
ಈ ಚಿತ್ರಕ್ಕೆ ಬಾಲಿವುಡ್‍ನ ಚಿತ್ರದ ಪ್ರಚಾರ ವೇದಿಕೆಗಳಲ್ಲಿ ಪ್ರಚಾರ ಸಿಗಲಿಲ್ಲ. ಕಪಿಲ್ ಶರ್ಮಾ ಶೋ ಸೇರಿದಂತೆ ಬಾಲಿವುಡ್‍ನ ವೇದಿಕೆಗಲ್ಲಿ ಚಿತ್ರಕ್ಕೆ ಶೋ ಕೊಡಲಿಲ್ಲ. ಆರಂಭದಲ್ಲಿ ಈ ಚಿತ್ರಕ್ಕೆ ಸಿಕ್ಕಿದ್ದು ದೇಶದಾದ್ಯಂತ 200ರಿಂದ 300 ಶೋಗಳು ಮಾತ್ರ. ಕೆಲವು ಪತ್ರಿಕೆಗಳು ಚಿತ್ರವನ್ನು ಪ್ರಚಾರ ಮಾಡಲಿಲ್ಲ. ಅದೆಲ್ಲವನ್ನೂ ಮೀರಿ ಕಾಶ್ಮೀರ್ ಫೈಲ್ಸ್ ಗೆದ್ದಾದ ಮೇಲೆ ಚಿತ್ರಕ್ಕೆ ರಾಜಕೀಯ ಪ್ರಚಾರವೂ ಸಿಕ್ಕಿತು. ಕರ್ನಾಟಕವೂ ಸೇರಿದಂತೆ ವಿವಿದ ಬಿಜೆಪಿ ಆಡಳಿತದ ರಾಜ್ಯಗಳಲ್ಲಿ ತೆರಿಗೆ ವಿನಾಯಿತಿಯೂ ಸಿಕ್ಕಿತು. ಇದೂವರೆಗೆ ಅತೀ ಹೆಚ್ಚು ಲಾಭ ಮಾಡಿದ ಚಿತ್ರಗಳಲ್ಲಿ ಕಾಶ್ಮೀರ್ ಫೈಲ್ಸ್ ಚಿತ್ರಕ್ಕೆ ನಂ.1 ಸ್ಥಾನವಿದೆ.
ಆದರೆ ಚಿತ್ರವನ್ನು ಫಿಲಂಫೇರ್ ವೇದಿಕೆಯಿಂದ ಹೊರಗಿಡಲಾಗಿದೆ. ಬಾಲಿವುಡ್ ಇದನ್ನು ಸಂಭ್ರಮಿಸಿಲ್ಲ. ಚಿತ್ರದ ಬಗ್ಗೆ ಕೆಲವು ನಟ, ನಿರ್ದೇಶಕರು ಲೇವಡಿ ಮಾಡಿ ಮಾತನಾಡಿದ್ದಾರೆ. ಜೊತೆಗೆ ಫಿಲಂಫೇರ್ ಪ್ರಶಸ್ತಿ ಆಯ್ಕೆಗೂ ಪರಿಗಣಿಸಿಲ್ಲ. ಜೊತೆಗೆ ಚಿತ್ರವನ್ನು ಯಾವುದೇ ಪ್ರಶಸ್ತಿಗೂ ಆಯ್ಕೆ ಮಾಡಿಲ್ಲ. ಇದು ವಿವಾದವನ್ನೂ ಹುಟ್ಟುಹಾಕಿದೆ. ಆದರೆ ಫಿಲಂಫೇರ್ ಎಂದಿನಂತೆ.. ಟೀಕಾಕಾರಿಗೆಲ್ಲ ಡೋಂಟ್ ಕೇರ್ ಉತ್ತರ.