` ಬುದ್ದಿ ಬೆಳೆಯದ ಮಗನ ಕಥೆ ಹೇಳಿಕೊಂಡ ಮಾಳವಿಕಾ ಅವಿನಾಶ್ - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
ಬುದ್ದಿ ಬೆಳೆಯದ ಮಗನ ಕಥೆ ಹೇಳಿಕೊಂಡ ಮಾಳವಿಕಾ ಅವಿನಾಶ್
ಬುದ್ದಿ ಬೆಳೆಯದ ಮಗನ ಕಥೆ ಹೇಳಿಕೊಂಡ ಮಾಳವಿಕಾ ಅವಿನಾಶ್

ಬದುಕು ಜಟಕಾ ಬಂಡಿ.. ಹಲವು ನೋವಿನ ಕಥೆಗೆ ಮುಖಾಮುಖಿಯಾಗುವ ಮಾಳವಿಕಾ ತಮ್ಮ ಬದುಕಿನ ಕಥೆಯನ್ನು ಇದೇ ಮೊದಲ ಬಾರಿಗೆ ಹೇಳಿಕೊಂಡಿದ್ದಾರೆ. ಮಾಳವಿಕಾ ಮತ್ತು ಅವಿನಾಶ್ ಅವರಿಗೆ ಮಗುವಿದೆ. ಅದು ಬುದ್ದಿಮಾಂದ್ಯ ಮಗು. ಚಿತ್ರರಂಗದಲ್ಲಿರುವವರು, ಕೆಲವು ಪತ್ರಕರ್ತರು.. ಸೇರಿದಂತೆ ಹಲವು ಆತ್ಮೀಯರಿಗೆ ವಿಷಯ ಗೊತ್ತಿದೆಯಾದರೂ ಮಾಳವಿಕಾ ಆಗಲೀ, ಅವಿನಾಶ್ ಅವರಾಗಲೀ ಹೇಳಿಕೊಂಡಿರಲಿಲ್ಲ.

ಚಿತ್ರರಂಗ, ರಾಜಕೀಯ ಎಲ್ಲ ಒತ್ತಡಗಳ ಮಧ್ಯೆಯೂ ಮಗುವಿನ ಆರೈಕೆ ಬಿಡುವುದಿಲ್ಲ. ಹಲವು ರಾಜಕೀಯ ಮತ್ತು ಸಿನಿಮಾ ಕಾರ್ಯಗಳನ್ನು ಮಗುವಿಗಾಗಿಯೇ ಬಿಟ್ಟುಕೊಟ್ಟಿರುವ ದಂಪತಿ ಮಾಳವಿಕಾ-ಅವಿನಾಶ್. ಇತ್ತೀಚೆಗೆ ತಮ್ಮ ಈ ನೋವಿನ ಬಗ್ಗೆ ಹೇಳಿಕೊಂಡಿದ್ದಾರೆ.

ಖಾಸಗಿ ಚಾನೆಲ್ಲೊಂದರಲ್ಲಿ ಜಡ್ಜ್ ಆಗಿರುವ ಮಾಳವಿಕಾ ಸಹನಾ ಎಂಬ ಕಿವಿ ಕೇಳದ ಮಗುವಿನ ನೃತ್ಯ ಪ್ರತಿಭೆ ನೋಡಿ ಮೆಚ್ಚಿಕೊಂಡರು. ದೈಹಿಕ ನ್ಯೂನತೆ ಮೆಟ್ಟಿ ನಿಂತ ಮಗುವಿನ ಬಗ್ಗೆ ಮಾತನಾಡುವಾಗ ತಮ್ಮ ಕಥೆಯನ್ನೂ ಹೇಳಿಕೊಂಡರು.

ಮಾನಸಿಕವಾಗಿ ಬೆಳವಣಿಗೆಯಾಗದ ತಮ್ಮ ಮಗನ ಬಗ್ಗೆ ಹೇಳಿಕೊಂಡರು. ಮಗು ಮಾನಸಿಕವಾಗಿ ಬೆಳವಣಿಗೆಯಾಗಿಲ್ಲ ಎಂಬುದು 8 ತಿಂಗಳಿರುವಾಗ ಗೊತ್ತಾಯಿತು. ಅವನಿಗೆ ಸಂಗೀತದ ಭಾಷೆ ಗೊತ್ತು. ಉಳಿದ ಮಕ್ಕಳಂತೆ ಅವನಿಗೆ ಅರ್ಥವಾಗಲ್ಲ. ಆದರೆ ಸಂಗೀತದ ಮೂಲಕ ಅರ್ಥ ಮಾಡಿಕೊಳ್ತಾನೆ. ಅಪ್ಪಾಜಿ ಅವರ ನಟನೆಯ ಹಾಡುಗಳು, ಅರ್ಜುನ್ ಜನ್ಯಾ ಹಾಡುಗಳು, ಶಿವಣ್ಣ ಅವರ ಓಂ ಚಿತ್ರದ ಹಾಡುಗಳು ಇವನ್ನೆಲ್ಲ ಅರ್ಥ ಮಾಡಿಕೊಳ್ತಾನೆ. ಎಲ್ಲ ಮಕ್ಕಳೂ ದೇವರ ಮಕ್ಕಳು ಎಂದಿದ್ದಾರೆ ಮಾಳಿವಿಕ ಅವಿನಾಶ್.