` ಅನಂತನಾಗ್ @75 : ಸೇನೆ, ವಾಯುಪಡೆಗೆ ರಿಜೆಕ್ಟ್ ಮಾಡಿತ್ತು - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
ಅನಂತನಾಗ್ @75 : ಸೇನೆ, ವಾಯುಪಡೆಗೆ ರಿಜೆಕ್ಟ್ ಮಾಡಿತ್ತು
Ananth Nag

ಅನಂತನಾಗ್ ಅವರಿಗೆ 75 ವರ್ಷ. ಚಿತ್ರರಂಗದಲ್ಲಿಯೇ 49 ವರ್ಷ ಕಳೆದಿರುವ ಅನಂತನಾಗ್ ಅವರ ವೃತ್ತಿ ಜೀವನದಲ್ಲಿ ವಿಶೇಷತೆಗಳೇ ತುಂಬಿ ಹೋಗಿವೆ. ನಟನಾಗಿ ವಿಭಿನ್ನ ಅಲೆಯ ಸಿನಿಮಾಗಳಷ್ಟೇ ಅಲ್ಲದೆ ಕಾಮಿಡಿ, ಸಂಸಾರಿಕ, ಕಮರ್ಷಿಯಲ್ ಚಿತ್ರಗಳ ಮೂಲಕವೂ ಮನಗೆದ್ದ ನಟ. ರಂಗಭೂಮಿಯಲ್ಲಿ ಕೂಡಾ ತೊಡಗಿಸಿಕೊಂಡಿದ್ದ ಅನಂತನಾಗ್ ಪೂರ್ವಜರು ಮೂಲತಃ ಕಾಶ್ಮೀರಿ ಪಂಡಿತರು. ಕಾಶ್ಮೀರದಿಂದ ವಲಸೆ ಬಂದ ಕುಟುಂಬದವರಾದ ಕಾಶ್ಮೀರಿ ಪಂಡಿತರ ಪೂರ್ವಜರು ಕನ್ನಡಿಗರೇ ಆಗಿ ಹೋದರು. ಕೊಂಕಣಿ, ಕನ್ನಡ, ಮರಾಠಿ ಮಾತನಾಡುತ್ತಾ ಬದುಕಿದವರು. ಅಂದಹಾಗೆ ಅನಂತನಾಗ್ ಶ್ರೀಮಂತರೇನಲ್ಲ. ಮಠವೊಂದರ ಮೇಲ್ವಿಚಾರಕರಾಗಿದ್ದರು ತಂದೆ.

1972ರಲ್ಲಿ ಇಂಡೋ-ಚೀನಾ ಯುದ್ಧ ನೆನಪಿದೆ ತಾನೆ.. ಆಗ ವಾಯುಸೇನೆಗೆ ಸೇರಲು ಅನಂತನಾಗ್ ಅರ್ಜಿ ಹಾಕಿದ್ದರು. ವಾಯುಸೇನೆಗೆ ಎಲ್ಲ ಅರ್ಹತೆಗಳಿದ್ದವು. ಆದರೆ ಎಡಗಣ್ಣು ದೋಷವಿತ್ತು. ಆ ಸಮಸ್ಯೆ ಇಂದಿಗೂ ಹಾಗೆಯೇ ಇದೆ. ಅದರಿಂದಾಗಿ ಅನಂತನಾಗ್ ವಾಯುಸೇನೆ ಸೇರ್ಪಡೆ ತಪ್ಪಿತು. ಹಠ ಬಿಡದ ಅನಂತನಾಗ್ ಭೂಸೇನೆ ಸೇರಲು ಪ್ರಯತ್ನಿಸಿದರು. ತೂಕವೇ ಇರಲಿಲ್ಲ. ವಯಸ್ಸಿಗೆ ತಕ್ಕಂತೆ ತೂಕ ಇರದ ಕಾರಣ ಭೂಸೇನೆಯೂ ರಿಜೆಕ್ಟ್ ಆಯಿತು. ಆಮೇಲೆ ಇಂಗ್ಲಿಷ್ ಬಾರದ ಕಾರಣ ಓದಿನಲ್ಲಿ ಆಸಕ್ತಿಯೂ ಕಡಿಮೆಯಾಯ್ತು. ಬ್ಯಾಂಕಿನಲ್ಲಿ ಕೆಲಸ ಮಾಡಿಕೊಂಡು ತಮ್ಮ ಶಂಕರನನ್ನು ಸಾಕಿದರು. ರಂಗಭೂಮಿಯಲ್ಲಿನ ಆಸಕ್ತಿ ಚಿತ್ರರಂಗದೆಡೆಗೆ ತಂದಿತು ಎಂದಿದ್ದಾರೆ.