ಸುದೀಪ್ ಅವರ ಬಗ್ಗೆ ಎಲ್ಲ ವೇದಿಕೆಗಳಲ್ಲೂ ಮುಕ್ತವಾಗಿ ಹೊಗಳುವ ಶಿವಣ್ಣ, ಸುದೀಪ್ ನಮ್ಮ ಕುಟುಂಬದ ಸದಸ್ಯ ಎನ್ನುತ್ತಾರೆ. ಗೀತಾ ಅವರನ್ನು ಗೀತಕ್ಕ ಎಂದೇ ಕರೆಯುವ ಸುದೀಪ್ ಅವರಿಗೆ ಗೀತಕ್ಕ ಈ ಹುಟ್ಟುಹಬ್ಬಕ್ಕೆ ಒಂದು ವಿಶೇಷ ಗಿಫ್ಟ್ ಕೊಟ್ಟಿದ್ದಾರೆ.
ಸುದೀಪ್ ಅವರ ಮನೆಗೆ ಶಿವಣ್ಣ ಮತ್ತು ಗೀತಾ ಶಿವರಾಜಕುಮಾರ್ ಹೋಗಿ ವಿಶೇಷ ಕೇಕ್ ತಯಾರಿಸಿ ಹ್ಯಾಪಿ ಬರ್ತ್‍ಡೇ ಎಂದು ಹೇಳಿ ಶುಭ ಕೋರಿದ್ದಾರೆ. ಸುದೀಪ್ ಹುಟ್ಟುಹಬ್ಬವನ್ನು ಅವರ ಕುಟುಂಬದ ಜೊತೆ ಶಿವಣ್ಣ ಕುಟುಂಬವೂ ಸೆಲಬ್ರೇಟ್ ಮಾಡಿದೆ.
ಅಂದಹಾಗೆ ಕೇಕ್ ತಯಾರಿಸೋದ್ರಲ್ಲಿ ಗೀತಾ ಅವರು ಎಕ್ಸ್‍ಪರ್ಟ್. ಶಕ್ತಿಧಾಮದ ಮಕ್ಕಳಿಗೂ ಕೇಕ್ ತಯಾರಿಸೋ ಟ್ರೈನಿಂಗ್ ಕೊಡುತ್ತಿರೋ ಗೀತಾ ಸುದೀಪ್ ಅವರಿಗಾಗಿ ವಿಶೇಷ ಕೇಕ್ ಕಾಣಿಕೆ ಕೊಟ್ಟು ಹಾರೈಸಿದ್ದಾರೆ.