ಮೇಘರಾಜನ ರಾಗ..
ಹನಿಗಳಾದಂತೆ..
ಧಮನಿ ಧಮನಿಯೂ ಸೇರಿ..
ದನಿಗಳಾದಂತೆ..
ಹಿನ್ನೆಲೆಯಲ್ಲಿ ಅರವಿಂದ್ ವೇಣುಗೋಪಾಲ್ ಅವರ ಕಂಠ ಹೃದಯದಿಂದಲೇ ಚಿಮ್ಮುತ್ತಿದೆಯೇನೋ ಎಂಬಂತೆ ಹಾಡುತ್ತಿದ್ದರೆ.. ಕೇಳುಗ ಅಲ್ಲೇ ಕಳೆದುಹೋಗುತ್ತಾನೆ. ಕೆ.ಕಲ್ಯಾಣ್ ಅವರ ಪದಗಳು ಚೆಂದವೋ.. ಅಜನೀಶ್ ಲೋಕನಾಥ್ ಮ್ಯೂಸಿಕ್ ಚೆಂದವೋ.. ಡಾಲಿ-ರಚಿತಾರ ನಗುಮೊಗವೇ ಚೆಂದವೋ.. ಮಾನ್ಸೂನ್ ರಾಗ ನೇರ ಹೃದಯಕ್ಕಿಳಿದಿದೆ.
ಇತ್ತೀಚೆಗಷ್ಟೇ ಲವ್ 360 ಚಿತ್ರದ ಜಗವೇ ನೀನು ಗೆಳತಿಯೇ.. ಹಾಡು ಮೆಲೋಡಿ ಯುಗಕ್ಕೆ ಹೊತ್ತುಕೊಂಡು ಹೋಗಿತ್ತು. ಗಾಳಿಪಟದ ನಾನಾಡದ ಮಾತೆಲ್ಲವ.. ಹಾಡೂ ಮೋಡಿ ಮಾಡಿತ್ತು. ಕಾಂತಾರದ ಸಿಂಗಾರ ಸಿರಿಯೇ.. ಅಂತಹುದೇ ಸಿರಿ ಹೊತ್ತು ತಂದಿತ್ತು. ಈಗ.. ಮಾನ್ಸೂನ್ ರಾಗದ
ಮೇಘರಾಜನ ರಾಗ..
ಹನಿಗಳಾದಂತೆ..
ಮೆಲೋಡಿ ಯುಗಕ್ಕೆ ಅಳಿವಿಲ್ಲ ಎನ್ನುವುದನ್ನು ಸಾಬೀತು ಪಡಿಸಿದೆ. ಸಂಗೀತ ಗುನುಗುನುಗುನುಗುವಂತಿದೆ. ಎಸ್.ರವೀಂದ್ರನಾಥ್ ನಿರ್ದೇಶನದ ಮಾನ್ಸೂನ್ ರಾಗ ಚಿತ್ರಕ್ಕೆ ಎ.ಆರ್.ವಿಖ್ಯಾತ್ ನಿರ್ಮಾಪಕ. ಡಾಲಿ ಧನಂಜಯ, ರಚಿತಾ ರಾಮ್, ಸುಹಾಸಿನಿ, ಅಚ್ಯುತ್ ಕುಮಾರ್, ಯಶಾ ಶಿವಕುಮಾರ್ ಮೊದಲಾದವರು ನಟಿಸಿರುವ ಮಾನ್ಸೂನ್ ರಾಗ ಸೆಪ್ಟೆಂಬರ್ 16ಕ್ಕೆ ರಿಲೀಸ್ ಆಗುತ್ತಿದೆ.