ಇಬ್ಬರು ಸ್ಟಾರ್ ನಟರ ಚಿತ್ರಗಳು ಏಕಕಾಲಕ್ಕೆ ಬಿಡುಗಡೆಯಾಗುವುದು ಹೊಸದಲ್ಲ. ಈಗದು ವಿಶೇಷವೂ ಅಲ್ಲ. ಏಕೆಂದರೆ ಪ್ರೇಕ್ಷಕರ ಮುಂದೆ ಆಯ್ಕೆಗಳಿರುತ್ತವೆ. ಈ ಬಾರಿ ದಸರಾಗೆ ಕೂಡಾ ಹಾಗೆಯೇ ಆಗುತ್ತಿದೆ. ಸೆಪ್ಟೆಂಬರ್ 30ರಂದು ರಿಷಬ್ ಶೆಟ್ಟಿ ಮತ್ತು ಜಗ್ಗೇಶ್ ಚಿತ್ರಗಳು ಮುಖಾಮುಖಿಯಾಗುತ್ತಿವೆ.
ರಿಷಬ್ ಶೆಟ್ಟಿ ನಟಿಸಿ ನಿರ್ದೇಶಿಸಿರುವ ಕಾಂತಾರಾ ಚಿತ್ರಕ್ಕೆ ಹೊಂಬಾಳೆ ಬ್ಯಾನರ್ ಬಂಡವಾಳ ಹೂಡಿದೆ. ರಿಷಬ್ ಶೆಟ್ಟಿ, ಸಪ್ತಮಿ ಗೌಡ, ಅಚ್ಯುತ್ ಕುಮಾರ್, ಪ್ರಮೋದ್ ಶೆಟ್ಟಿ ಪ್ರಮುಖ ಪಾತ್ರದಲ್ಲಿ ನಟಿಸಿರುವ ಸಿನಿಮಾ. ಅಜನೀಶ್ ಲೋಕನಾಥ್ ಸಂಗೀತ ನಿರ್ದೇಶನದಲ್ಲಿ ಬಂದ ಸಿಂಗಾರ ಸಿರಿಯೇ.. ಸಿನಿರಸಿಕರಿಗೆ ರಸಿಕತೆಯ ಕರಾವಳಿ ಅನುಭವ ಕೊಟ್ಟಿದೆ. ಈ ಶಿಕ್ಷಕರ ದಿನಾಚರಣೆ ದಿನ ಕಾಂತಾರ ಚಿತ್ರದ ಟ್ರೇಲರ್ ಹೊರಬೀಳಲಿದೆ.
ಅದೇ ದಿನ ರಿಲೀಸ್ ಆಗುತ್ತಿರುವ ಸಿನಿಮಾ ತೋತಾಪುರಿ. ಈಗಾಗಲೇ ಬಾಗ್ಲು ತೆಗಿ ಮೇರಿ ಜಾನ್.. ಸೇರಿದಂತೆ ಚಿತ್ರದ ಹಾಡು ಮತ್ತು ಚೇಷ್ಟೆಗಳನ್ನು ಪ್ರೇಕ್ಷಕರು ಇಷ್ಟಪಟ್ಟಿದ್ದಾರೆ. ಜಗ್ಗೇಶ್, ಆದಿತಿ ಪ್ರಭುದೇವ, ಡಾಲಿ ಧನಂಜಯ, ಸುಮನ್ ರಂಗನಾಥ್, ದತ್ತಣ್ಣ, ಪವಿತ್ರಾ ಲೋಕೇಶ್ ಪ್ರಮುಖ ಪಾತ್ರದಲ್ಲಿರೋ ಚಿತ್ರದ ಮೇಲೆ ಭಾರಿ ನಿರೀಕ್ಷೆಯೂ ಇದೆ. ವಿಜಯ ಪ್ರಸಾದ್ ನಿರ್ದೇಶನದ ತೋತಾಪುರಿಯನ್ನು ಕೆವಿಎನ್ ಪ್ರೊಡಕ್ಷನ್ಸ್ ವಿತರಣೆ ಮಾಡುತ್ತಿದೆ. ಕೆ.ಎ.ಸುರೇಶ್ ನಿರ್ಮಾಣದ ಚಿತ್ರವೂ ಸೆ.30ರಂದೇ ರಿಲೀಸ್ ಆಗುತ್ತಿದ