ಅಭಿಮಾನಿಗಳ ಹೃದಯದಲ್ಲಿ ಕಿಚ್ಚನಾಗಿ ಅರಮನೆಯನ್ನೇ ಕಟ್ಟಿಕೊಂಡಿರುವ ನಟ ಸುದೀಪ್ ಅವರಿಗೆ ಹಲವಾರು ಪ್ರಶಸ್ತಿ, ಪುರಸ್ಕಾರ, ಗೌರವಗಳು ಸಂದಿವೆ. ಈಗ ಆ ಗೌರವದ ದೊಡ್ಡ ಹೆಜ್ಜೆ ರಾಷ್ಟ್ರೀಯ ಮಟ್ಟದ ಗೌರವ. ಅದೂ ಅಂಚೆ ಇಲಾಖೆಯಿಂದ.
ಹೌದು, ಕಿಚ್ಚ ಸುದೀಪ್ ಅವರಿಗಾಗಿ ಭಾರತೀಯ ಅಂಚೆ ಇಲಾಖೆ ವಿಶೇಷ ಲಕೋಟೆ ಸಿದ್ಧಪಡಿಸಿದೆ. ಚಿತ್ರರಂಗದಲ್ಲಿ 25 ವರ್ಷ ಪೂರೈಸಿರುವ ಸುದೀಪ್ ಅವರ ಮನೆಗೆ ತೆರಳಿದ್ದ ಅಂಚೆ ಇಲಾಖೆ ಅಧೀಕ್ಷಕರಾದ ಮಾದೇಶ್, ಈ ಅಂಚೆ ಲಕೋಟೆಗೆ ಸುದೀಪ್ ಅವರಿಗೆ ನಿರಾಕ್ಷೇಪಣ ಪತ್ರ ಪಡೆದರು.
ಈ ಅಂಚೆ ಲಕೋಟೆಯ ಬಿಡುಗಡೆ ಕಾರ್ಯಕ್ರಮವನ್ನು ಅಂಚೆ ಇಲಾಖೆಯೇ ಆಯೋಜಿಸಲಿದ್ದು, ಆ ಕಾರ್ಯಕ್ರಮದ ನಂತರ ಎಲ್ಲೆಡೆ ಪೋಸ್ಟ್ ಆಫೀಸುಗಳಲ್ಲಿ ಸುದೀಪ್ ಎನ್ವಲಪ್ ಕವರ್ ಸಿಗುತ್ತವೆ.