ಶಿವ 143 ರಿಲೀಸ್ ಆಗಿದೆ. ಧಿರೇನ್ ರಾಮಕುಮಾರ್ ಅಭಿನಯದ ಮೊದಲ ಸಿನಿಮಾ ಇದು. ಮಾಸ್.ಆ್ಯಕ್ಷನ್.ರೊಮ್ಯಾನ್ಸ್.ಲವ್... ಎಲ್ಲವೂ ಇರುವ ಚಿತ್ರ ಹೊಸ ಮಾಸ್ ಹೀರೋಗೆ ಜನ್ಮ ಕೊಟ್ಟಿದೆ. ಧಿರೇನ್ ಮತ್ತು ಮಾನ್ವಿತಾ ಕಾಮತ್ ಇಬ್ಬರೂ ಶಿವ-ಮಧು ಪಾತ್ರವನ್ನು ಆವಾಹಿಸಿಕೊಂಡು ನಟಿಸಿದ್ದಾರೆ. ರಾಜ್ ಕುಟುಂಬದ ಕುಡಿಯಾಗಿ ಅಂತಾದ್ದೊಂದು ಪಾತ್ರ ಒಪ್ಪಿಕೊಂಡ ಧಿರೇನ್ ಮತ್ತು ಅಂತಹ ನಾಯಕಿಯ ಪಾತ್ರಕ್ಕೆ ಓಕೆ ಎಂದು ನಟಿಸಿದ ಮಾನ್ವಿತಾ ಕಾಮತ್ ಇಬ್ಬರ ಧೈರ್ಯವನ್ನೂ ಮೆಚ್ಚಿಕೊಳ್ಳಲೇಬೇಕು.
ಚಿತ್ರರಂಗದಲ್ಲಿ ಹಿರಿ ಕಿರಿಯರೆನ್ನದೆ ಎಲ್ಲರಿಗೂ ಶುಭ ಕೋರುವ ಪ್ರತಿಯೊಬ್ಬರ ಚಿತ್ರದ ಗೆಲುವನ್ನೂ ಸಂಭ್ರಮಿಸುವ ಶಿವಣ್ಣ ಸೋದರಳಿಯನ ಚಿತ್ರ ನೋಡೋಕೆ ಇವತ್ತು ಚಿತ್ರಮಂದಿರಕ್ಕೇ ಬರುತ್ತಿದ್ದಾರೆ. ದಂಪತಿ ಸಮೇತ.
ಮೆಜೆಸ್ಟಿಕ್‍ನ ಸಂತೋಷ್ ಚಿತ್ರಮಂದಿರಕ್ಕೆ ಇಂದು ಶಿವಣ್ಣ ಹಾಗೂ ಗೀತಾ ಶಿವರಾಜಕುಮಾರ್ ಬಂದು ಶಿವ 143 ವೀಕ್ಷಿಸಲಿದ್ದಾರೆ. ಅಭಿಮಾನಿಗಳ ಜೊತೆ. ಸಮಯ ಸಂಜೆ 7 ಗಂಟೆಗೆ.
ಜಯಣ್ಣ-ಭೋಗೇಂದ್ರ-ಡಾ.ಸೂರಿ ನಿರ್ಮಾಣದ ಚಿತ್ರಕ್ಕೆ ಅನಿಲ್ ಕುಮಾರ್ ನಿರ್ದೇಶನವಿದೆ. ಚಿತ್ರಕ್ಕೆ ಬಿಡುಗಡೆಗೂ ಮುನ್ನ ಕನ್ನಡ ಚಿತ್ರರಂಗದ ಸ್ಟಾರ್ ನಟರು ಶುಭ ಕೋರಿದ್ದರು. ರಾಜ್ ಫ್ಯಾಮಿಲಿಯವರಷ್ಟೇ ಅಲ್ಲದೆ ಕಿಚ್ಚ ಸುದೀಪ್ ಸೇರಿದಂತೆ ಚಿತ್ರರಂಗದ ಹಿರಿಯರೆಲ್ಲ ಧಿರೇನ್‍ಗೆ ಸ್ವಾಗತ ಕೋರಿದ್ದರು. ಈಗ ಪ್ರೇಕ್ಷಕರೂ ಉಘೇ ಎಂದಿದ್ದಾರೆ.