ಜೊತೆ ಜೊತೆಯಲಿ ಧಾರಾವಾಹಿಯಿಂದ ಅನಿರುದ್ಧ್ ಜತ್ಕರ್ ಅವರನ್ನು ತೆಗೆದ ನಂತರ ಆ ಪಾತ್ರಕ್ಕೆ ಯಾರು ಎಂಬ ಪ್ರಶ್ನೆ ಅಭಿಮಾನಿಗಳಿಗೆ ಕಾಡುತ್ತಿರೋದು ನಿಜ. ಆ ಪಾತ್ರಕ್ಕೆ ಹಲವು ಹೆಸರುಗಳು ಕೇಳಿಬಂದವಾದರೂ ದೊಡ್ಡಮಟ್ಟದಲ್ಲಿ ಸದ್ದು ಮಾಡಿದ್ದು ರಂಗಿತರಂಗ, ವಿಕ್ರಾಂತ್ ರೋಣ ಖ್ಯಾತಿಯ ನಿರ್ದೇಶಕ ಅನೂಪ್ ಭಂಡಾರಿ ಅವರ ಹೆಸರು.
ಜೊತೆ ಜೊತೆಯಲಿ ಚಿತ್ರೀಕರಣ ನಿಂತಿಲ್ಲ. ಆರ್ಯವರ್ಧನ್ ಪಾತ್ರವನ್ನು ಹೊರಗಿಟ್ಟುಕೊಂಡೇ ಕೆಲವು ಎಪಿಸೋಡ್ ಶೂಟ್ ಆಗುತ್ತಿವೆ. ಚಿತ್ರೀಕರಣವಂತೂಊ ಎಡಬಿಡದೆ ಸಾಗಿದೆ. ಈ ನಡುವೆಯೇ ಅನೂಪ್ ಭಂಡಾರಿ ತಮಗೆ ಆರ್ಯವರ್ಧನ್ ಪಾತ್ರಕ್ಕೆ ಆಫರ್ ಬಂದಿದ್ದು ನಿಜ ಎಂದಿದ್ದಾರೆ.
ಆಫರ್ ಬಂದಿದ್ದು ನಿಜ. ನಾನು ನೋ ಎಂದಿದ್ದೂ ನಿಜ. ಸದ್ಯಕ್ಕೆ ನಾನು ಇನ್ನೊಂದು ಚಿತ್ರದ ಕೆಲಸದಲ್ಲಿ ಬ್ಯುಸಿಯಾಗಿದ್ದೇನೆ. ಶೀಘ್ರದಲ್ಲೇ ಆ ಹೊಸ ಪ್ರಾಜೆಕ್ಟ್ ಅನೌನ್ಸ್ ಆಗಲಿದೆ ಎಂದಿದ್ದಾರೆ ಅನೂಪ್.
ಅತ್ತ ಅನಿರುದ್ಧ್ ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಅವರು ನನ್ನನ್ನು ಬಿಟ್ಟಿರಬಹುದು, ನಾನು ಬಿಟ್ಟಿಲ್ಲ. ಅವರು ಕರೆದರೆ ಮತ್ತೆ ಹೋಗಲು ಸಿದ್ಧ ಎಂದಿದ್ದಾರೆ ಅನಿರುದ್ಧ್.
ಇದರ ನಡುವೆ ಆರ್ಯವರ್ಧನ್ ಪಾತ್ರಕ್ಕೆ ವಿಜಯ್ ರಾಘವೇಂದ್ರ, ಜೆಕೆ ಸೇರಿದಂತೆ ಹಲವರ ಹೆಸರು ಚರ್ಚೆಯಾಗುತ್ತಿರುವುದಂತೂ ಸತ್ಯ. ಆದರೆ ಧಾರಾವಾಹಿ ತಂಡದವರು ಯಾವುದೇ ಹೆಸರನ್ನು ಎಸ್ ಎಂದೂ ಹೇಳ್ತಿಲ್ಲ. ನೋ ಎಂದೂ ಹೇಳ್ತಿಲ್ಲ.