` ಕನ್ನಡ ಇಂಡಸ್ಟ್ರಿ ಇಷ್ಟು ಬೋಲ್ಡ್ ಹೀರೋಯಿನ್ ನೋಡಿಲ್ಲ: ಮಾನ್ವಿತಾ ಕಾಮತ್ - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
ಕನ್ನಡ ಇಂಡಸ್ಟ್ರಿ ಇಷ್ಟು ಬೋಲ್ಡ್ ಹೀರೋಯಿನ್ ನೋಡಿಲ್ಲ: ಮಾನ್ವಿತಾ ಕಾಮತ್
Shiva 143 Movie Image

ಕೆಂಡಸಂಪಿಗೆಯ ಮುಗ್ಧ ಪ್ರೇಮಿ, ಟಗರು ಚಿತ್ರದ ಸ್ವಲ್ಪ ಬೋಲ್ಡ್ ಎನ್ನಿಸುವಂತಾ ಅಭಿನಯದ ಮೂಲಕ ಮನಸ್ಸು ಗೆದ್ದವರು ಮಾನ್ವಿತಾ ಕಾಮತ್. ಆದರೆ ಶಿವ 143 ಚಿತ್ರದಲ್ಲಿನ ಅವರ ಪಾತ್ರ ಹಾಗಲ್ಲ.

ಈ ಚಿತ್ರದಲ್ಲಿ ಬೋಲ್ಡ್ ಆಗಿ ನಟಿಸಿದ್ದೇನೆ. ಎಷ್ಟು ಬೋಲ್ಡ್ ಎಂದರೆ ಕನ್ನಡ ಚಿತ್ರರಂಗದಲ್ಲಿ ಇಷ್ಟು ಬೋಲ್ಡ್ ಆಗಿ ನಟಿಸಿರುವ ಇನ್ನೊಬ್ಬ ಹೀರೋಯಿನ್‍ನ್ನು ನೀವು ನೋಡಿರಲು ಸಾಧ್ಯವಿಲ್ಲ. ನಾಯಕಿಯ ಪಾತ್ರ ಎಷ್ಟು ಬೋಲ್ಡ್ ಎಂದರೆ ಎಕ್ಸ್‍ಪೋಸಿಂಗ್ ಅಷ್ಟೇ ಅಲ್ಲ, ವರ್ತನೆಯಲ್ಲೂ ಬೋಲ್ಡ್. ಪಾತ್ರಕ್ಕೇನೋ ನ್ಯಾಯ ಒದಗಿಸಿದ್ದೇನೆ. ಆದರೆ ಸಿನಿಮಾ ನೋಡಿದವರು ನನ್ನನ್ನೂ ದ್ವೇಷಿಸಲು ಶುರು ಮಾಡಬಹುದು. ಅಷ್ಟು ಭಯ ನನಗೆ ಇದೆ. ಆ ದ್ವೇಷ ಅಳಿಸುವುದೇ ನನಗಿರೋ ಸವಾಲು ಎಂದಿದ್ದಾರೆ ಮಾನ್ವಿತಾ ಕಾಮತ್.

ಶಿವ 143 ಇದೇ ಶುಕ್ರವಾರ ರಿಲೀಸ್ ಅಗುತ್ತಿದೆ. ಧಿರೇನ್ ರಾಮಕುಮಾರ್ ಮೊದಲ ಸಿನಿಮಾ ಶಿವ 143. ಇದು ತೆಲುಗಿನ ಆರ್ ಎಕ್ಸ್ 100 ಚಿತ್ರದ ರೀಮೇಕ್. ತೆಲುಗಿನಲ್ಲಿ ಆ ಪಾತ್ರದಲ್ಲಿ ನಟಿಸಿದ್ದವರು ಪಾಯಲ್ ರಜಪೂತ್. ಆದರೆ ನಾನು ನನ್ನದೇ ಸ್ಟೈಲಿನಲ್ಲಿ ನಟಿಸಿದ್ದೇನೆ. ಚಿತ್ರದಲ್ಲಿ ನನ್ನದು ಮಧು ಹೆಸರಿನ ಪಾತ್ರ. ಆ ಮಧು ಪಾತ್ರದ ಇಮೇಜ್‍ನಿಂದ ಹೊರಬರಲು ಕೂಡಾ ಪ್ಲಾನ್ ಮಾಡಬೇಕು ಎಂದಿದ್ದಾರೆ ಮಧು ಅಲಿಯಾಸ್ ಮಾನ್ವಿತಾ ಕಾಮತ್.