ಡಾಲಿ ಧನಂಜಯ ಸ್ಯಾಂಡಲ್`ವುಡ್ನ ಹೊಸ ಸ್ಟಾರ್. ಎಲ್ಲಿ ಹೋದರೂ ಮುತ್ತಿಕೊಳ್ಳುವ ಅಭಿಮಾನಿಗಳಿಗೆ ಕೊರತೆಯಿಲ್ಲ. ಒಂದರ ಹಿಂದೊಂದು ಹಿಟ್ ಕೊಟ್ಟಿರುವ ನಟ ಡಾಲಿಗೆ ನಾಳೆ ಅಂದ್ರೆ ಆಗಸ್ಟ್ 23ರಂದು ಹುಟ್ಟುಹಬ್ಬ. ಹುಟ್ಟುಹಬ್ಬಕ್ಕೆ ಅಭಿಮಾನಿಗಳು ಏನೇನು ಪ್ಲಾನ್ ಮಾಡಿಕೊಂಡಿದ್ದರೋ ಏನೋ.. ಅವೆಲ್ಲಕ್ಕೂ ಫುಲ್ ಸ್ಟಾಪ್ ಇಟ್ಟಿದ್ದಾರೆ ಡಾಲಿ ಧನಂಜಯ.
ಆಗಸ್ಟ್ 23ರಂದು ಡಾಲಿ ಧನಂಜಯ ಮನೆಯಲ್ಲಿ ಇರಲ್ಲ. ಬೆಂಗಳೂರಿನಲ್ಲೂ ಇರಲ್ಲ.
ನನ್ನ ಹುಟ್ಟುಹಬ್ಬವನ್ನು ಈ ಹಿಂದೆ ರಕ್ತದಾನ ಶಿಬಿರ, ನೇತ್ರದಾನ ನೋಂದಣಿ ಶಿಬಿರ ಸೇರಿದಂತೆ ಏನೇನೋ ಮಾಡಿ ಆಚರಣೆ ಮಾಡುವ ಮಾಡುವ ಅಭಿಮಾನಿಗಳೇ.. ನಿಮ್ಮೊಂದಿಗೆ ಸೇರಿ ಹುಟ್ಟುಹಬ್ಬ ಆಚರಿಸುವ ಆಸೆ ನನಗೂ ಇದೆ. ಕಳೆದ 2 ವರ್ಷ ಕೊರೊನಾದಿಂದ ಯಾವುದೂ ಆಗಿಲ್ಲ. ಈ ವರ್ಷ ಕೂಡಾ ಪರಿಸ್ಥಿತಿ ಭಿನ್ನವಾಗಿಲ್ಲ. ಅಪ್ಪು ಸರ್ ನಮ್ಮನ್ನು ಅಗಲಿ ವರ್ಷವೂ ಆಗಿಲ್ಲ. ಶಿವಣ್ಣ ಸೇರಿದಂತೆ ಯಾರೂ ಹುಟ್ಟುಹಬ್ಬ ಆಚರಿಸಿಕೊಂಡಿಲ್ಲ. ಹೇಗೆ ಈ ಹಿಂದಿನ 2 ವರ್ಷ ಕ್ಷಮಿಸಿ ಪ್ರೀತಿಸಿ ಹುಟ್ಟುಹಬ್ಬಕ್ಕೆ ಶುಭ ಕೋರಿದಿರೋ.. ಹಾಗೆಯೇ ಈ ವರ್ಷವೂ ಕ್ಷಮಿಸಿ ಶುಭಾಶಯ ಹೇಳಿಬಿಡಿ. ಮುಂದಿನ ವರ್ಷ ಒಟ್ಟಿಗೇ ಸೇರೋಣ ಎಂದಿದ್ದಾರೆ ಡಾಲಿ ಧನಂಜಯ.