ಅರೆ ಹೌದಾ.. ರಾಘವೇಂದ್ರ ರಾಜಕುಮಾರ್ ಬಿಜೆಪಿ ಸೇರಿಕೊಂಡು ಬಿಟ್ರಾ? ಅವರನ್ನು ಮೋದಿ ಡೈರೆಕ್ಟ್ ಆಗಿ ಗವರ್ನರ್ ಮಾಡುತ್ತಿದ್ದಾರಾ.. ಎಂದೆಲ್ಲ ತಲೆಗೆ ಹುಳ ಬಿಟ್ಕೋಬೇಡಿ. ರಾಘವೇಂದ್ರ ರಾಜಕುಮಾರ್ ಅವರನ್ನು ಗವರ್ನರ್ ಮಾಡ್ತಿರೋದು ಪ್ರಧಾನಿ ನರೇಂದ್ರ ಮೋದಿ ಅಲ್ಲ. ನಿರ್ದೇಶಕ ಎಸ್.ಎಸ್.ಶಂಕರನಾಗ್.
ಧ್ರುವ 360 ಅನ್ನೋ ಸಿನಿಮಾ ಸೆಟ್ಟೇರಿದ್ದು ಈ ಚಿತ್ರದಲ್ಲಿ ರಾಘವೇಂದ್ರ ರಾಜಕುಮಾರ್ ರಾಜ್ಯಪಾಲರ ಪಾತ್ರ ಮಾಡುತ್ತಿದ್ದಾರೆ. ಇತ್ತೀಚೆಗೆ ಹೊಸ ಹೊಸ ಜಾನರ್ ಕಥೆಗಾರರ ಜೊತೆ ಹೆಚ್ಚು ಹೆಚ್ಚು ಕೆಲಸ ಮಾಡುತ್ತಿರೋ ರಾಘವೇಂದ್ರ ರಾಜಕುಮಾರ್ ಚಿತ್ರದ ಪ್ರಮುಖ ಪಾತ್ರದಲ್ಲಿದ್ದಾರೆ.
ಸೈನ್ಸ್ ಮತ್ತು ಪುರಾಣ ಎರಡೂ ಅಂಶಗಳ ಕಥೆ ಚಿತ್ರದಲ್ಲಿದ್ದು ಸನ್ನಿವೇಶಕ್ಕೆ ತಕ್ಕಂತೆ ಸಂಸ್ಕøತ ಶ್ಲೋಕಗಳೂ ಬರಲಿವೆ. ಚಿತ್ರದ ಶೇ.40ರಷ್ಟು ಗ್ರಾಫಿಕ್ಸ್ ಎಂದು ಮಾಹಿತಿ ಕೊಟ್ಟಿರೋದು ಡೈರೆಕ್ಟರ್ ಶಂಕರನಾಗ್.
ರಾಘವೇಂದ್ರ ರಾಜಕುಮಾರ್ ಜೊತೆ ಚಂದನಾ, ಪ್ರತಿಭಾ, ರಮೇಶ್ ಭಟ್, ರಮ್ಯಾ, ಚಂದ್ರಿಕಾ ಮೊದಲಾದವರು ನಟಿಸುತ್ತಿದ್ದಾರೆ. ಬೆಂಗಳೂರು, ಮಂಗಳೂರು, ಉಡುಪಿ, ಮುರುಡೇಶ್ವರ, ಕೋಲಾರ, ಚಿಕ್ಕಬಳ್ಳಾಪುರದಲ್ಲಿ ಚಿತ್ರೀಕರಣ ನಡೆಯಲಿದೆಯಂತೆ.