ಇತ್ತೀಚೆಗೆ ಜನಸಾಮಾನ್ಯರ ಸೋಷಿಯಲ್ ಮೀಡಿಯಾ ಅಕೌಂಟುಗಳನ್ನೂ ನಕಲಿ ಸೃಷ್ಟಿ ಮಾಡಿ ಹಣ ದೋಚುವ ದಂಧೆಯೇ ನಡೆಯುತ್ತಿದೆ. ಇನ್ನು ಸೆಲಬ್ರಿಟಿಗಳ ವಿಷಯವನ್ನಂತೂ ಕೇಳೋದೇ ಬೇಡ. ಈ ಅನುಭವ ಈಗಾಗಲೇ ಹಲವು ಸ್ಟಾರ್ ನಟ, ನಟಿಯರಿಗೆ ಆಗಿದೆ. ನಿರ್ದೇಶಕರ ಹೆಸರಿನಲ್ಲಿ ನಕಲಿ ಶೂರರು ದೊಡ್ಡ ಆಟಗಳನ್ನೇ ಆಡುತ್ತಿದ್ದಾರೆ. ಈಗ ದುನಿಯಾ ಸೂರಿ ಸರದಿ.
ಟ್ವಿಟರಿನಲ್ಲಿ ದುನಿಯಾ ಸೂರಿ ಹೆಸರಿನಲ್ಲಿ ಒಂದು ಅಕೌಂಟ್ ಶುರುವಾಗಿದೆ. ಅವರದ್ದೇ ಫೋಟೋ.. ಅವರದ್ದೇ ಅಪ್‍ಡೇಟ್ಸ್. ವಿಚಿತ್ರವೆಂದರೆ.. ಆ ಅಕೌಂಟುದಾರ ದುನಿಯಾ ಸೂರಿ ಅಲ್ಲ. ಇನ್ಯಾವನೋ.. ಅವರ ಫೋಟೋ ಬಳಸಿ ಫೇಕ್ ಐಡಿ ಸೃಷ್ಟಿಸಿದ್ದಾರೆ.
ನಾನು ಸೋಷಿಯಲ್ ಮೀಡಿಯಾದಲ್ಲಿ ಇರೋದು ಇನ್‍ಸ್ಟಾಗ್ರಾಂನಲ್ಲಿ ಮಾತ್ರ. ಉಳಿದಂತೆ ಯಾವುದೇ ಸೋಷಿಯಲ್ ಮೀಡಿಯಾದಲ್ಲಿ ಇಲ್ಲ. ದಯವಿಟ್ಟು ಇದನ್ನು ನಂಬಬೇಡಿ. ಸೈಬರ್ ಕ್ರೈಂನವರಿಗೆ ದೂರು ನೀಡುತ್ತಿದ್ದೇನೆ ಎಂದಿದ್ದಾರೆ ದುನಿಯಾ ಸೂರಿ.