` ಫಾರಿನ್ನಲ್ಲೂ ಗಾಳಿಪಟ ಹವಾ ಭಲೇ ಜೋರು - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
ಫಾರಿನ್ನಲ್ಲೂ ಗಾಳಿಪಟ ಹವಾ ಭಲೇ ಜೋರು
Gaalipata 2 Movie Image

ಗೋಲ್ಡನ್ ಸ್ಟಾರ್ ಗಣೇಶ್ ಹಲವು ದಾಖಲೆಗಳನ್ನು ಬರೆದಿದ್ದಾರೆ. ವಿದೇಶದಲ್ಲಿ ದೊಡ್ಡ ಮಟ್ಟದಲ್ಲಿ ಓಪನಿಂಗ್ ಪಡೆದುಕೊಂಡ ಮೊದಲ ಕನ್ನಡದ ನಟರೂ ಅವರೇ. ಈಗ ಗಾಳಿಪಟ 2 ಕೂಡಾ ಅದೇ ಹಾದಿಯಲ್ಲಿದೆ.

ವಿಶ್ವದಾದ್ಯಂತ ಏಕಕಾಲಕ್ಕೆ ರಿಲೀಸ್ ಆಗಿದ್ದ ಗಾಳಿಪಟ 2 ಒಳ್ಳೆಯ ಕಲೆಕ್ಷನ್ ಮಾಡುತ್ತಿವೆ. ಥಿಯೇಟರುಗಳು ತುಂಬಿ ತುಳುಕುತ್ತಿವೆ. ಪ್ರೇಕ್ಷಕರಿಗೆ ನಗು ಮತ್ತು ಅಳು ಎರಡನ್ನೂ ಕೈತುಂಬಾ ನೀಡಿ ಭಾವುಕರನ್ನಾಗಿಸಿ ಕಳಿಸುತ್ತಿದೆ ಗಾಳಿಪಟ. ಸ್ನೇಹ-ಪ್ರೀತಿಗಳ ನಡುವಿನ ಕಥೆಯಲ್ಲಿ ಕನ್ನಡದ ಕಥೆಯೂ ಇರುವುದು ಪ್ರೇಕ್ಷಕರಿಗೆ ಖುಷಿಯೋ ಖುಷಿ. ಎಲ್ಲಕ್ಕಿಂತ ಹೆಚ್ಚಾಗಿ ಈ ಚಿತ್ರ ನೋಡಿದೆ ಎಂದು ಹೇಳಿಕೊಳ್ಳೋದು ಹೆಮ್ಮೆಯಾಗಿದೆ.

ಇದೆಲ್ಲದರ ಜೊತೆ ಗಣೇಶ್ ಅವರ ವಿದೇಶಿ ಮಾರುಕಟ್ಟೆ ವಿಸ್ತರಿಸಿರೋದು. ವಿದೇಶಗಳಲ್ಲಿ 150ಕ್ಕೂ ಹೆಚ್ಚು ಕಡೆ ರಿಲೀಸ್ ಮಾಡಿದ್ದು ಈಗ ಮತ್ತಷ್ಟು ಶೋಗಳ ಸಂಖ್ಯೆ ಸೇರ್ಪಡೆಗೊಳ್ಳುತ್ತಿದೆ. ಕಲೆಕ್ಷನ್ ಕೂಡಾ ನಿರೀಕ್ಷೆಗಿಂತ ಹೆಚ್ಚಾಗಿದೆ.

ಕಲೆಕ್ಷನ್ ಖುಷಿ ಕೊಟ್ಟಿದೆ. ಈ ಹಿಂದೆ ನನ್ನ ಚಿತ್ರಗಳು ಸೋತಿದ್ದವು. ಆದರೆ ಗಾಳಿಪಟ 2 ಆ ಎಲ್ಲ ಸೋಲುಗಳನ್ನೂ ಮರೆಯುವಂತಾ ಗೆಲುವು ಕೊಟ್ಟಿದೆ. ಗೆದ್ದಿದ್ದೇನೆ.ಲಾಭ ಎಷ್ಟು ಅನ್ನೋದನ್ನ ಮಾಕ್ರ್ಸ್‍ಕಾರ್ಡ್ ಬಂದ ಮೇಲೆ ಹೇಳುತ್ತೇನೆ ಎಂದಿದ್ದಾರೆ ರಮೇಶ್ ರೆಡ್ಡಿ.

ಚಿತ್ರದ ಗೆಲುವನ್ನು ಯೋಗರಾಜ್ ಭಟ್ ಮತ್ತು ರಮೇಶ್ ರೆಡ್ಡಿಗೆ ನೀಡಿದ್ದಾರೆ ಗಣೇಶ್. ಗಣೇಶ್-ವೈಭವಿ ಶಾಂಡಿಲ್ಯ, ಪವನ್ ಕುಮಾರ್-ಶರ್ಮಿಳಾ ಮಾಂಡ್ರೆ, ದಿಗಂತ್-ಸಂಯುಕ್ತಾ ಮೆನನ್ ಜೋಡಿಯ ಜೊತೆ ಅನಂತನಾಗ್ ಕನ್ನಡ ಮೇಷ್ಟ್ರು ಪಾತ್ರದಲ್ಲಿ ಕಾಣಿಸಿಕೊಂಡಿರುವ ಚಿತ್ರ ಗಾಳಿಪಟ 2.