Print 
km veeresh om prakash rao chitraloka editor km veeresh

User Rating: 0 / 5

Star inactiveStar inactiveStar inactiveStar inactiveStar inactive
 
ಚಿತ್ರಲೋಕ ವೀರೇಶ್ ಗೆ ಕ್ಷಮೆ ಕೇಳಿದ ಓಂ ಪ್ರಕಾಶ್ ರಾವ್
ಚಿತ್ರಲೋಕ ವೀರೇಶ್ ಗೆ ಕ್ಷಮೆ ಕೇಳಿದ ಓಂ ಪ್ರಕಾಶ್ ರಾವ್

ಕನ್ನಡ ಚಿತ್ರರಂಗದ ಖ್ಯಾತ ನಿರ್ದೇಶಕರಲ್ಲಿ ಒಬ್ಬರಾಗಿರುವ ಓಂಪ್ರಕಾಶ್ ರಾವ್ ಈಗ ಚಿತ್ರಲೋಕ ಡಾಟ್ ಕಾಮ ಸಂಪಾದಕ ಕೆ.ಎಂ.ವೀರೇಶ್ ಅವರ ಬಳಿ ಕ್ಷಮೆ ಕೇಳಿದ್ದಾರೆ. ಅವರು ಕ್ಷಮೆ ಕೇಳೋಕೆ ಕಾರಣ ಅವರೇ ಮಾಡಿಕೊಂಡ ತಪ್ಪು. ಹೇಳಿದ ಸುಳ್ಳು. ಮಾಡಿದ ತಲೆಬುಡವಿಲ್ಲದ ಆರೋಪ.

ಇತ್ತೀಚೆಗೆ ಯೂಟ್ಯೂಬ್ ಚಾನೆಲ್ಲೊಂದರಲ್ಲಿ ಮಾತನಾಡುತ್ತಿದ್ದ ಓಂಪ್ರಕಾಶ್ ರಾವ್ ನನಗೆ ಚಿತ್ರಲೋಕ ವೀರೇಶ್ ಕಟ್ಟೆ ಚಿತ್ರಕ್ಕೆ ಎಲ್ಲ ಕಡೆ ಪ್ರಚಾರ ಕೊಡಿಸುತ್ತೇನೆ ಎಂದು 1.8 ಕೋಟಿ ಹಣ ತೆಗೆದುಕೊಂಡು ಮೋಸ ಮಾಡಿದರು ಎಂದಿದ್ದರು. ನಂತರ 16 ಲಕ್ಷ ಎಂದಿದ್ದರು. 

ಆದರೆ ಯಾವಾಗ ಕೆ.ಎಂ.ವೀರೇಶ್ ಓಂ ಪ್ರಕಾಶ್ ರಾವ್ ಸುವರ್ಣ ನ್ಯೂಸ್ ಜಾಹೀರಾತಿಗಾಗಿ ನೀಡಿದ್ದ ಹಣದ ದಾಖಲೆ, ರಸೀದಿ, ದಿನಾಂಕ, ರಸೀದಿಯ ನಂಬರ್‍ಗಳ ಸಮೇತ ಮುಂದಿಟ್ಟು ಕಾನೂನು ಕ್ರಮದ ಎಚ್ಚರಿಕೆ ಕೊಟ್ಟರೋ.. ಆಗ ಓಂಪ್ರಕಾಶ್ ರಾವ್ ಅವರಿಗೆ ತಪ್ಪಿನ ಅರಿವಾಗಿದೆ.

ಸಾ ರಾ ಗೋವಿಂದು ಕರೆದ ತಕ್ಷಿಣ ಓಂ ಪ್ರಕಾಶ್ ತಪ್ಪಾಯ್ತು ಕ್ಷಮಿಸಿ ಎಂದು ಬಂದಿದ್ದಾರೆ. ಕ್ಷಮೆ ಕೇಳಿದ್ದಾರೆ. ಗೊತ್ತಿಲ್ಲದೇ ಆದ ತಪ್ಪು. ಏನೋ ಮಾತನಾಡೋಕೆ ಹೋಗಿ ಇನ್ನೇನೋ ಮಾತನಾಡಿಬಿಟ್ಟೆ. ಕ್ಷಮಿಸಿ ಎಂದು ಕೈಮುಗಿದಿದ್ದಾರೆ. ಜೊತೆ ವೀರೇಶ್ ಅವರ ಪತ್ನಿ ಬಳಿ ಮಾತನಾಡಿ ಅವರಿಗೆ ಸಾರಿ ಕೇಳಿದ್ದಾರೆ.