ಗ್ಯಾಂಗ್ಸ್ ಆಫ್ ವಸೇಯ್‍ಪುರ್, ದೇವ್ ಡಿಯಂತಾ ಚಿತ್ರಗಳನ್ನು ನಿರ್ದೇಶಿಸಿರುವ ಅನುರಾಗ್ ಕಶ್ಯಪ್ ಬಾಲಿವುಡ್‍ನಲ್ಲಿ ದೊಡ್ಡ ಹೆಸರಲ್ಲದೇ ಹೋದರೂ.. ಒಂದು ಲೆವೆಲ್ಲಿಗೆ ಖ್ಯಾತ ನಿರ್ದೇಶಕ. ನಟನಾಗಿಯೂ ಗುರುತಿಸಿಕೊಂಡಿರುವ ಅನುರಾಗ್ ಕಶ್ಯಪ್ ಇತ್ತೀಚೆಗೆ ಬಾಲಿವುಡ್‍ನಲ್ಲಿ ಹೆಚ್ಚುತ್ತಿರುವ ಸೌಥ್ ಸ್ಟಾರ್‍ಗಳ ಬಗ್ಗೆ ಮಾತನಾಡಿದ್ದಾರೆ.
ಉತ್ತರ ಭಾರತದಲ್ಲಿನ ಜನರಿಗೆ ಈಗ ಪುಷ್ಪರಾಜ್ ಗೊತ್ತು. ರಾಕಿಭಾಯ್ ಗೊತ್ತು. ಫಹಾದ್ ಫಾಸಿಲ್ ಬಗ್ಗೆ ಗೊತ್ತು. ಶಾರುಕ್, ಅಮೀರ್ ಖಾನ್ ಮೇಲಿನ ಪ್ರೀತಿ, ಮೋಹ ಕ್ರೇಜ್ ಎಲ್ಲ ಇಳಿದು ಹೋಗಿದೆ. ಇವರ ಮೂಲ ಹೆಸರು ಹಳ್ಳಿ ಹಳ್ಳಿಗಳಿಗೆ ಇನ್ನೂ ತಲುಪಿಲ್ಲ. ಆದರೆ ಪುಷ್ಪರಾಜ್, ರಾಕಿಭಾಯ್ ಎಂದರೆ ಜನರಿಗೆ ಗೊತ್ತು ಎಂದಿದ್ದಾರೆ ಅನುರಾಗ್ ಕಶ್ಯಪ್.
ಇನ್ನೊಂದೆರಡು ಹಿಟ್ ಕೊಟ್ಟರೆ ಸಾಕು. ಆಗ ಉತ್ತರ ಭಾರತದ ಹಳ್ಳಿ ಹಳ್ಳಿಯ ಜನ ಕೂಡಾ ರಾಕಿಭಾಯ್ ಎಂದರೆ ಯಶ್, ಪುಷ್ಪರಾಜ್ ಎಂದರೆ ಅಲ್ಲು ಅರ್ಜುನ್ ಎಂದು ಹೆಸರು ಹೇಳೋಕೆ ಶುರು ಮಾಡ್ತಾರೆ ಎಂದಿದ್ದಾರೆ.
ಒಂದೆಡೆ ಬಾಲಿವುಡ್‍ನ ದೊಡ್ಡ ದೊಡ್ಡ ಸ್ಟಾರ್ ನಟರ ಚಿತ್ರಗಳೆಲ್ಲ ತೋಪಾಗುತ್ತಿರುವಾಗ ದಕ್ಷಿಣ ಭಾರತದ ಸ್ಟಾರ್ ಚಿತ್ರಗಳು ಹಿಂದಿಯಲ್ಲಿ ಸದ್ದು ಮಾಡುತ್ತಿರುವುದು ವಿಶೇಷ. ಬಾಯ್ಕಾಟ್ ಅಭಿಯಾನವಲ್ಲ, ಒಂದು ಲೆಕ್ಕಕ್ಕೆ ಹೇಳಬೇಕೆಂದರೆ ಬಾಲಿವುಡ್ ಚಿತ್ರಗಳ ಕ್ವಾಲಿಟಿಯೇ ಮಾಯವಾಗಿರುವುದು ನಿಜ. ಬಹುತೇಕ ಚಿತ್ರಗಳಲ್ಲಿ ಭಾರತೀಯ ನೆಲದ, ಭಾರತೀಯ ಸಂಸ್ಕøತಿಯ ಕಥೆಯೇ ಇರುವುದಿಲ್ಲ. ಗೊತ್ತಿಲ್ಲದ ದೇಶದ, ಅರಗಿಸಿಕೊಳ್ಳೋಕೆ ಕಷ್ಟವಾಗುವ ಕಥಾ ಹಂದರದ ಚಿತ್ರಗಳನ್ನು ಜನರಾದರೂ ಏಕೆ ನೋಡುತ್ತಾರೆ ಅಲ್ಲವೇ? ಅದೇನೇ ಇರಲಿ, ಸೌಥ್ ಸ್ಟಾರ್‍ಗಳನ್ನು ಒಪ್ಪಿಕೊಂಡಿರೋ ಬಗ್ಗೆ ಬಾಲಿವುಡ್ ನಿರ್ದೇಶಕರೂ ಮಾತನಾಡುವಂತಾಗಿದೆ. ದಟ್ಸ್ ಗ್ರೇಟ್.